ತೋಕೂರು: ದಿ.ಬೂಬ ದೇವಾಡಿಗರ ಸ್ಮರಣಾರ್ಥ 35 ನೇ ವರ್ಷದ ಗ್ರಾಮೀಣ ಕ್ರಿಕೆಟ್ ಪಂದ್ಯಾಟ ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ಮೈ ಭಾರತ್ ದ. ಕ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ. ಕ ಜಿಲ್ಲೆ, ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ, ದ. ಕ ಜಿಲ್ಲೆ ಮಾರ್ಗದರ್ಶನದಲ್ಲಿ ಸಮಾರೋಪ ಸಮಾರಂಭವು ಭಾನುವಾರ(21) ಸಂಜೆ 6 ಗಂಟೆಗೆ ನೆರವೇರಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಅಧ್ಯಕ್ಷರು ಕುಸುಮಾ ಚಂದ್ರಶೇಖರ್ ಅವರು ವಹಿಸಿ ಮಾತನಾಡಿದ ಅವರು ಕಳೆದ 34 ವರ್ಷಗಳಿಂದ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವುದು ಅಷ್ಟು ಸುಲಭದ ಮಾತಲ್ಲ ಮತ್ತು ಸಂಸ್ಥೆಯ ಕಾರ್ಯ ವೈಖಾರಿಯನ್ನು ಶ್ಲಾಘಿಸಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ, ಆರೋಗ್ಯ ಹಾಗೂ ಏಕಾಗ್ರತೆ ಸುಧಾರಿಸುತ್ತದೆ. ಸೋಲು, ಗೆಲುವು ಸಾಮಾನ್ಯ. ಆದರೆ, ಕ್ರೀಡೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವುದೇ ಬಹುಮುಖ್ಯವಾಗಿರುತ್ತದೆ ಎಂದು ಶ್ರೀ ಧರ್ಮ ಶಾಸ್ತ ಭಕ್ತವೃಂದ ಬಾಂದ್ರಾ ಮುಂಬೈ ಇಲ್ಲಿನ ಅಧ್ಯಕ್ಷರಾದ ರಾಮಣ್ಣ ದೇವಾಡಿಗ ಟೂರ್ನಿಯ ಬಹುಮಾನ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ನ ಸದಸ್ಯ ಮೋಹನ್ ದಾಸ್, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ.ಸಿ ಕೋಟ್ಯಾನ್ ಮತ್ತು ಅಶೋಕ್ ಕುಂದರ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು, ಹಳೆಯಂಗಡಿ ಇದರ ಗೌರವ ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್, ಅಧ್ಯಕ್ಷರಾದ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ನಂದಿನಿ ಆರಂದ್ ಟ್ರೋಫಿ ಗಳಿಸುವ ಮೂಲಕ ಪ್ರಥಮ ಬಹುಮಾನ ಮತ್ತು ಓಂ ಪಾವಂಜೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ನಂದಿನಿ ಆರಂದ್ ನ ಚಿರಾಗ್, ಉತ್ತಮ ದಾಂಡಿಗ ಪ್ರಶಸ್ತಿ ಒಂ ಪಾವಂಜೆಯ ಮಿಥುನ್, ಉತ್ತಮ ಬೌಲರ್ ಪ್ರಶಸ್ತಿ ಓಂ ಪಾವಂಜೆಯ ಕಾರ್ತಿಕ್ ,ಎರಡು ಸೆಮಿಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಂದಿನ್ ಆರಂದ್ ನ ಗೌತಮ್,ಮತ್ತು ಓಂ ಪಾವಂಜೆಯ ಕಾರ್ತಿಕ್ ಹಾಗೂ ಟೂರ್ನಿಯ ಸರಣಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನಂದಿನಿ ಆರಂದ್ ನ ಪ್ರತೀಕ್ ಪಡೆದುಕೊಂಡರು.
ಈ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಥಮ ನಗದು ದಿ. ಬೂಬ ದೇವಾಡಿಗ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮನೆಯವರು, ದ್ವಿತೀಯ ನಗದು ಮತ್ತು ಶಾಶ್ವತ ಫಲಕ ರಹಮತ್ತುಲ್ಲಾ ದುಬೈ, ಪ್ರತಿ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಶ್ರೀ ರಾಜೇಶ್ ಕುಲಾಲ್ ತೋಕೂರು, ಉತ್ತಮ ದಾಂಡಿಗ ಪ್ರಶಸ್ತಿ ಸುಧೀರ್ ದೇವಾಡಿಗ ಪಾವಂಜೆ, ಉತ್ತಮ ಎಸೆತಗಾರ ಪ್ರಶಸ್ತಿ ಉದಯ ಪೂಜಾರಿ ಮುಂಬೈ, ಸೆಮಿಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪುಂಡಲೀಕ ಬೆಲ್ಚಡ್ ಮತ್ತು ಮಕ್ಕಳು ತೋಕೂರು, ಸರಣಿ ಶ್ರೇಷ್ಠ ಪ್ರಶಸ್ತಿ ಶ್ರೀ ಹರಿಪ್ರಸಾದ್ ಸುವರ್ಣ ದುಬೈ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಶಂಕರ್ ಪೂಜಾರಿ ತೋಕೂರು ಹಾಗೂ ಜಯಂತ್ ಕುಂದರ್ ಸಂಕಲಕರಿಯ ವಾಮನ.ಎಸ್.ದೇವಾಡಿಗ ತೋಕೂರು, ರಮೇಶ್ ಆಚಾರ್ಯ ತೋಕೂರು, ಶೇಖರ್ ಶೆಟ್ಟಿಗಾರ್ ತೋಕೂರು ಬಹುಮಾನವನ್ನು ನೀಡಿ ಸಹಕರಿಸಿದರು.
ಸಂಸ್ಥೆಯ ಅಧ್ಯಕ್ಷರು ಸುರೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ಜಗದೀಶ್ ಕುಲಾಲ್,ಕ್ರೀಡಾ ಕಾರ್ಯದರ್ಶಿ ಗೌತಮ್ ಬೆಲ್ಚೆಡ್, ತಂಡದ ನಾಯಕ ನೀರಜ್ ಕಿರೋಡಿಯನ್, ಉಪನಾಯಕ ಸಚಿನ್ ಆಚಾರ್ಯ ಹಾಗೂ ಪದಾಧಿಕಾರಿಗಳು, ಸದಸ್ಯರು ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಿಗೆ ಸಹಕರಿಸಿದರು.