ಬೆಳ್ತಂಗಡಿ: ಪೂಂಜಾಲಕಟ್ಟೆ ಸಮೀಪ ಪೊಲೀಸ್ ವಾಹನ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸವಾರ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಇದೀಗ ಸಂಭವಿಸಿದೆ. ಗಾಯಗೊಂಡ ಯುವಕ ಕೊಳ್ಕೆಬೈಲ್ ನಿವಾಸಿ ಹರ್ಷಿತ್ ಎಂದು ತಿಳಿದುಬಂದಿದ್ದು, ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಹರ್ಷಿತ್ ಪರೀಕ್ಷೆ ಬರೆಯಲು ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸ್ ವಾಹನವು ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದಾಗಿ ತಿಳಿದುಬಂದಿದೆ.
ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.