ಜಿಎಸ್‌ಟಿ ಇಳಿಕೆ ಬೆನ್ನಲ್ಲೇ ದೇಸೀ ನಂದಿನಿ ಹಾಲಿನ ದರ ಲೀಟರ್‌ಗೆ 40 ರೂ ಹೆಚ್ಚಳ!

ಬೆಂಗಳೂರು : ಜಿಎಸ್​​ಟಿ ಇಳಿಕೆಯಾಗಿ ಜನರು ಸಂಭ್ರಮಿಸುತ್ತಿರುವ ಬೆನ್ನಲ್ಲೇ ಇದೀಗ ಇದೀಗ ಕೆಎಂಎಫ್ ನಂದಿನಿ ಗ್ರಾಹಕರಿಗೆ ಶಾಕ್ ನೀಡಿದೆ. ನಂದಿನಿ ದೇಸಿ ಹಾಲಿನ ಬೆಲೆ ದಿಢೀರ್‌ ಏರಿಕೆ ಆಗಿದ್ದು, 1 ಲೀಟರ್​ ಹಾಲಿ​ಗೆ 40 ರೂಪಾಯಿ ಏರಿಕೆ ಮಾಡಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ನಂದಿನಿ ಹಾಲಿಗೆ ಗ್ರಾಹಕರು ಹೆಚ್ಚಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಂಸ್ಥೆ ಹಾಲಿನಲ್ಲೂ ವಿವಿಧ ವೆರೈಟಿಗಳನ್ನು ಪರಿಚರಿಸಿದ್ದು, ಅವುಗಳಲ್ಲಿ ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ.

ಒಂದು ಲೀಟರ್​ ದೇಸಿ ಹಾಲು 120 ರೂಪಾಯಿ ಇದೆ. ಅರ್ಧ ಲೀಟರ್ ದೇಸಿ ಹಾಲಿಗೆ 60 ರೂ ಇದೆ. ಈ ಮೊದಲು ಒಂದು ಲೀಟರ್ ದೇಸಿ ಹಾಲು 80 ರೂ. ಇತ್ತು. ಅರ್ಧ ಲೀಟರ್ 40 ರೂ. ಇತ್ತು. ಇದೀಗ ಏಕಾಏಕಿ ಕೆಎಂಎಫ್​ 40 ರೂಪಾಯಿ ಹೆಚ್ಚಳ ಮಾಡಿದೆ.
ಕೆಎಂಎಫ್ ದೇಸಿ ಹಸುವಿನ ಹಾಲು ಮಾರಾಟ ಮಾಡುತ್ತಿದ್ದು, ಇದೀಗ ಬೇಡಿಕೆ ಹೆಚ್ಚಾಗಿದೆ. ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಕೆಎಂಎಫ್ ಈ ಹಾಲಿನ ಮಾರಾಟಕ್ಕೆ ಮುಂದಾಗಿತ್ತು. ಬೆಂಗಳೂರು ಡೈರಿಗೆ ಪ್ರತಿದಿನ 3 ಸಾವಿರ ಲೀ. ದೇಸಿ ಹಾಲು ಪೂರೈಕೆ ಮಾಡಲಾಗ್ತಿದೆ ಎಂದು ವರದಿ ಆಗಿದೆ.

ಬೆಂಗಳೂರಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆ ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ದೇಸಿ ಹಸು ದಿನಕ್ಕೆ 1-2 ಲೀಟರ್ ಗರಿಷ್ಟ ಹಾಲು ಕೊಡುತ್ತದೆ. ದೇಸಿ ಹಸು ಹಾಲಿಗೆ ಡಿಮ್ಯಾಂಡ್ ಹೆಚ್ಚಿದ್ದು, ಪೂರೈಕೆ ಕಡಿಮೆ ಆದ ಕಾರಣ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗಿದೆ. ಶೇ. 90ರಷ್ಟು ಹಣವನ್ನ ದೇಸಿ ಹಸು ರೈತರಿಗೆ ಕೊಡಲಾಗುತ್ತಿತ್ತು ಎಂದು ಕೆಎಂಎಫ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

error: Content is protected !!