ಬಂಗ್ಲೆಗುಡ್ಡೆಯಲ್ಲಿ ಮತ್ತೆರಡು ತಲೆಬುರುಡೆಗಳು ಪತ್ತೆ?

ಬೆಳ್ತಂಗಡಿ: ಬಂಗ್ಲೆಗುಡ್ಡ ಕಾಡಿನಲ್ಲಿ ನಡೆಯುತ್ತಿರುವ ಎಸ್‌ಐಟಿ ಶೋಧ ಕಾರ್ಯಾಚರಣೆಯ ವೇಳೆ ಮತ್ತೆ ಎರಡು ತಲೆಬುರುಡೆಗಳು ಪತ್ತೆಯಾಗಿರುವ ಮಾಹಿತಿ ಹೊರಬಂದಿದೆ.

ಬುಧವಾರದಂದು ಇದೇ ಕಾಡಿನೊಳಗೆ ಹಲವು ತಲೆಬುರುಡೆಗಳು ಪತ್ತೆಯಾಗಿದ್ದವು. ಗುರುವಾರ ಬೆಳಿಗ್ಗೆ ಪುನಃ ಪರಿಶೀಲನೆ ನಡೆಸಿದ ಅಧಿಕಾರಿಗಳು, ಇದೇ ಸ್ಥಳದಲ್ಲಿ ಇನ್ನೆರಡು ತಲೆಬುರುಡೆಗಳನ್ನು ಹಾಗೂ ಮಾನವ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಡ್ಡದ ಮೇಲ್ಭಾಗದಲ್ಲಿ ಎಲುಬಿನ ಭಾಗಗಳು ಚದುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಲ್ಲಾ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್‌ಐಟಿ ತಂಡ ಮುಂದುವರೆಸಿದೆ.

ಇಲ್ಲಿವರೆಗೆ ಒಟ್ಟು 7 ತಲೆಬುರುಡೆಗಳು ಹಾಗೂ ಸಾಕಷ್ಟು ಎಲುಬಿನ ಅವಶೇಷಗಳು ಪತ್ತೆಯಾಗಿದ್ದು, ಪ್ರಕರಣದ ಗಂಭೀರತೆ ಹೆಚ್ಚಿಸಿದೆ.

error: Content is protected !!