ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ನೀರಜ್‌ ಚೋಪ್ರಾ ನೀರಸ ಪ್ರದರ್ಶನ, ಟಾಪ್ 7‌ ಪಟ್ಟಿಯಿಂದ ಹೊರಗೆ

ಟೋಕಿಯೊ (ಜಪಾನ್): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025 ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಕಷ್ಟಕರ ಆರಂಭವನ್ನು ದಾಖಲಿಸಿದ್ದಾರೆ. ಮೊದಲ ಮೂರು ಪ್ರಯತ್ನಗಳಲ್ಲಿ ಅವರು 83.65 ಮೀ, 84.03 ಮೀ ಎಸೆದಿದ್ದು, ಮೂರನೇ ಪ್ರಯತ್ನ ಫೌಲ್ ಆಗಿದೆ. ಈ ವೇಳೆಗೆ ಅವರು ಟಾಪ್ ಏಳು ಸ್ಥಾನಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನಿರಾಶೆ ಮೂಡಿಸಿದ್ದಾರೆ. ಅವರ ಮೊದಲ ಎಸೆತ 82.73 ಮೀ ಆಗಿದ್ದು, ನಂತರದ ಎರಡು ಎಸೆತಗಳು ಫೌಲ್ ಆಗಿವೆ. ಇದರಿಂದಾಗಿ ಅವರು ಪ್ರಸ್ತುತ 10ನೇ ಸ್ಥಾನದಲ್ಲಿದ್ದಾರೆ.

ಆದರೆ ಭಾರತದ ಮತ್ತೊಬ್ಬ ಪ್ರತಿನಿಧಿ ಸಚಿನ್ ಯಾದವ್ ಭರ್ಜರಿ ಪ್ರದರ್ಶನ ತೋರಿದ್ದು, 86.27 ಮೀ ದೂರದ ಎಸೆತದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಸುತ್ತಿನಲ್ಲಿ ಅವರು 85.71 ಮೀ ದಾಖಲಿಸಿದರೂ ಟಾಪ್ 4 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಟ್ರಿನಿಡಾಡ್ ಮತ್ತು ಟೊಬಾಗೋನ ಕೆಶೋರ್ನ್ ವಾಲ್ಕಾಟ್ 87.83 ಮೀ ಎಸೆದಿದ್ದು, ಅಗ್ರ ಸ್ಥಾನದಲ್ಲಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್ (87.38 ಮೀ) ಎರಡನೇ ಸ್ಥಾನದಲ್ಲಿದ್ದು, ಅಮೆರಿಕದ ಕರ್ಟಿಸ್ ಥಾಂಪ್ಸನ್ (86.67 ಮೀ) ಮೂರನೇ ಸ್ಥಾನದಲ್ಲಿದ್ದಾರೆ.

90 ಮೀಟರ್ ಗಡಿಯನ್ನು ದಾಟಿದ ಇತ್ತೀಚಿನ ಸಾಧನೆಯೊಂದಿಗೆ ಬಂದಿರುವ ನೀರಜ್ ಚೋಪ್ರಾ, ತಮ್ಮ ವಿಶ್ವ ಕಿರೀಟವನ್ನು ಉಳಿಸಿಕೊಳ್ಳಲು ಇತಿಹಾಸವನ್ನು ಬೆನ್ನಟ್ಟುತ್ತಿದ್ದಾರೆ. ಆದರೆ ಆರಂಭಿಕ ಪ್ರದರ್ಶನ ನಿರಾಶೆ ಮೂಡಿಸಿದ್ದು, ಮುಂದಿನ ಸುತ್ತುಗಳು ನಿರ್ಣಾಯಕವಾಗಲಿವೆ.

error: Content is protected !!