ಕೈಕೊಟ್ಟ ಪ್ರೀತಿಸಿದ ಯುವತಿ : ಮನನೊಂದ ಬಾಡಿ ಬಿಲ್ಡರ್ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬಾಡಿ ಬಿಲ್ಡರ್ ಆಗಿದ್ದ ಕಿರಣ್ (26) ಮೃತ ಯುವಕ.

ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಿರಣ್, ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಮನೆಗೆ ಬಂದು ರೂಮ್ ಲಾಕ್ ಮಾಡಿಕೊಂಡು ನೇಣಿಗೆ ಶರಣಾಗಿರುವ  ಘಟನೆ ನಡೆದಿದೆ.

ಹಲವು ವರ್ಷಗಳಿಂದ ಜಿಮ್ ಟ್ರೈನರ್, ಬಾಡಿ ಬಿಲ್ಡಿಂಗ್ ಮಾಡುತ್ತಿದ್ದ ಕಿರಣ್ ವ್ಯಾಲೇಂಟೈನ್ಸ್ ಡೇ ಗೆ ಆಕೆಗೆ ಗಿಫ್ಟ್ ಕೊಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದ, ಆದರೆ ಆಕೆ ಮದುವೆಯ ಆಮಂತ್ರಣ ಪತ್ರಿಕೆ, ಹೊಸ ಸೀರೆ ತೋರಿಸಿ ಶಾಕ್‌ ನೀಡಿದ್ದಾಳೆ. ಯುವತಿಗೆ ಮದುವೆಯ ನಿಶ್ಚಯವಾಗಿ ಇರೋ ವಿಷಯ ತಿಳಿದು ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ.

ಕೊಠಡಿಯಿಂದ ಹೊರಬರದಿದ್ದಾಗ, ಅವರ ಕುಟುಂಬ ಸದಸ್ಯರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮಹಾಲಕ್ಷ್ಮಿ ಪುರಂ ಲೇಔಟ್ ಪೋಲಿಸರು ಬೇಟಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ‌ವಿಕ್ಟೊರಿಯ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿದೆ.

error: Content is protected !!