ಮಂಗಳೂರು: ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಚಿಂತನೆ ಕಾರ್ಯಗತಗೊಂಡು ಸಾಕಾರಗೊಳ್ಳುವ ಭರವಸೆಯ ಕಾಲ ಘಟ್ಟದಲ್ಲಿದ್ದೇವೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪವೆಲ್ ನುಡಿದರು. ಅವರು ಕೋಟೆ ಸೂರಿಂಜೆ ನಾಯರ್ ಕೋಡಿ ಕುಟುಂಬಸ್ತರ ಪಟ್ಟಾ ಸ್ಥಳ ಮೈದಾನದಲ್ಲಿ ಜರಗಿದ ಹಿಂದು ಸಂಗಮ ಅಯೋಜನಾ ಸಮಿತಿ ಕಾಟಿಪಳ್ಳ ನಗರ ಸೂರಿಂಜೆ ಮತ್ತು ದೇಲಂತಬೆಟ್ಟು ಗ್ರಾಮದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಗಾರರಾಗಿ ಮಾತನಾಡಿದರು.


ವೇದಿಕೆಯಲ್ಲಿ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನರಾವ್ ಶಿಬರೂರು,ಮಂಗಳೂರು ಮೇದಿನಿ ಅಸೋಸಿಯೆಟ್ಸ್ ಆಡಳಿತ ನಿರ್ದೇಶಕಿ ಶಾಂಭವಿ ಬೋಜರಾಜ್ ಶೆಟ್ಟಿ, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಜ್ಯೋತಿಷರಾದ ಗಂಗಾಧರ ಶಿಬರೂರು, ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಸುರತ್ಕಲ್ ಚಾವಡಿ ಹಾಲ್ ನ ಮಾಲಕರಾದ ಡಿ.ಕೆ,ಶೆಟ್ಟಿ, ಹಿಂದು ಸಂಗಮ ಅಯೋಜನಾ ಸಮಿತಿ ಕಾಟಿಪಳ್ಳ ನಗರ ಗೌರವಾಧ್ಯಕ್ಷರಾದ ಸದಾಶಿವ ಐತಾಳ್,ಅಧ್ಯಕ್ಷರಾದ ಸೂರಂಜ್ ಅಂಚನ್,ಪ್ರಮುಖರಾದ ಮನೋಹರ ಶೆಟ್ಟಿ ಸೂರಿಂಜೆ, ಶಶಿಧರ ಶೆಟ್ಟಿ ಸೂರಿಂಜೆ, ಜಯಪ್ರಕಾಶ್ ಸೂರಿಂಜೆ, ಜೀತೇಂದ್ರ ಶೆಟ್ಟಿ ಶಿಬರೂರು, ಪೊನ್ನಗಿರಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ ,ಪರಶುರಾಮ ಶೆಟ್ಟಿ ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೇಸರರಾದ ಎಂ.ಮಧುಕರ ಅಮೀನ್ ವಹಿಸಿದ್ದರು ಬಾಲಕೃಷ್ಣ ಪುಚ್ಚಾಡಿ ಸ್ವಾಗತಿಸಿ, ಯತೀಶ್ ಶೆಟ್ಟಿ ಪಕ್ಕಳ ಧನ್ಯವಾದ ಸಮರ್ಪಿಸಿ ಪ್ರತಿಮಾ ಶರತ್ ಮತ್ತು ವಿಘ್ನೇಶ್ ಸೂರಿಂಜೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೊಳ್ಳಾರು ಕೋರ್ದಬ್ಬು ದೈವಸ್ಥಾನದಿಂದ ಕೋಟೆ ಸೂರಿಂಜೆವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು.