ಟ್ರ್ಯಾಕ್ಟರ್‌ ಬೈಕ್‌ಗೆ ಡಿಕ್ಕಿ: ಮಹಿಳೆ ಸಾ*ವು, ಇಬ್ಬರಿಗೆ ಗಂಭೀರ ಗಾಯ

ಗದಗ: ಕಬ್ಬು ತುಂಬಿಕೊಂಡು ಅತಿ ವೇಗವಾಗಿ ಬಂದ ಟ್ರ್ಯಾಕ್ಟರ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾರುಗೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಟ್ರ್ಯಾಕ್ಟರ್‌ನ ಹಿಂದಿನ ಟ್ರೇಲರ್ ಬೈಕ್‌ಗೆ ತಾಗಿದ ಪರಿಣಾಮ ಬೈಕ್‌ ಕೆಳಗೆ ಬಿದ್ದಿದ್ದು, ಬಾನು ಮೀರಾಸಾಬ ನದಾಫ್‌ ಅವರ ಮೇಲೆ ಟ್ರೇಲರ್‌ನ ಗಾಲಿ ಹಾದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲಾವುದ್ದಿನ್ ಸಮೀರ ನದಾಫ್‌ ಹಾಗೂ ಶೋಯೆಬ್‌ ಪಾರುಕ ನದಾಫ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಾರುಗೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!