ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ; ಕಾರಣ ನಿಗೂಢ, ಪೊಲೀಸರಿಂದ ತನಿಖೆ

ನವದೆಹಲಿ: ದೆಹಲಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೂವರ ಶವ ಪತ್ತೆಯಾಗಿದೆ. ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಾಪ್ರೋಲಾ ನಿವಾಸಿ ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ದೇವಿ (40 ವರ್ಷ) ಮತ್ತು ಶಿವ ನರೇಶ್ ಸಿಂಗ್ (47 ವರ್ಷ) ಎಂದು ಗುರುತಿಸಲಾಗಿದೆ.

ತುಂಬಾ ಹೊತ್ತಿನಿಂದ ಕಾರು ಅಲ್ಲೇ ನಿಂತಿದ್ದರಿಂದ ಅನುಮಾನಗೊಂಡ ಜನರು ಹತ್ತಿರಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ಪರೀಕ್ಷೆ ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!