ಅಜ್ಮೀರ್ (ರಾಜಸ್ಥಾನ): ʻಜಗತ್ತಿನಲ್ಲಿ ಕೆಟ್ಟ ತಾಯಿ ಹುಟ್ಟಲು ಸಾಧ್ಯವೇ ಇಲ್ಲʼ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿದಂತಹ ಹೇಯ ಕೃತ್ಯವೊಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ಬೆಳಕಿಗೆ ಬಂದಿದೆ. ಮದುವೆ ಎಂಬ ಪವಿತ್ರ ಸಂಬಂದಕ್ಕೆ ತಿಲಾಂಜಲಿ ಇಟ್ಟು, ಲಿವ್-ಇನ್- ರಿಲೇಷನ್‌ಷಿಪ್‌ನಂತಹಾ ಅಕ್ರಮ ಸಂಬಂಧವೇ ತಾಯಿ ತನ್ನ ಮಗಳನ್ನೇ ಕೊಲ್ಲುವಂತಹ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: 28 ವರ್ಷದ ಅಂಜಲಿ, ವಾರಣಾಸಿಯ ಮೂಲದವಳು. ಪತಿಯನ್ನು ಬಿಟ್ಟು, ಹೊಸ ಬದುಕಿನ ಕನಸುಗಳೊಂದಿಗೆ ಅಜ್ಮೀರ್ ಬಂದು ತನ್ನ ಪ್ರೇಮಿ ಅಲ್ಕೇಶ್ ಜೊತೆಗೆ ಲಿವ್-ಇನ್ ಸಂಬಂಧ ಇಟ್ಟುಕೊಂಡು ಅವನೊಂದಿಗೆ ವಾಸಿಸುತ್ತಿದ್ದಳು. ಅಲ್ಕೇಶ್, “ಮೊದಲ ಮದುವೆಯಿಂದ ಮಗಳನ್ನು ತಂದಿದ್ದೀಯೆ” ಎಂದು ನಿರಂತರವಾಗಿ ಅವಳನ್ನು ನಿಂದಿಸುತ್ತಾ ತನ್ನ ಹಲ್ಕಟ್ ಬುದ್ಧಿ ತೋರಿಸುತ್ತಿದ್ದ.
ಮಗಳೇ ತಮ್ಮಿಬ್ಬರ ಕಾಮಕ್ಕೆ ತೊಂದರೆ, ಎಂಬ ಅಸಹ್ಯ ಭಾಮವನೆಗೊಳಗಾದ ಅಂಜಲಿ ಅಂದು ತನ್ನ ಮುದ್ದಿನ ಮಗಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನ ಮೂರು ವರ್ಷದ ಮಗು – ಏನೂ ಅರಿಯದೆ ತೊಟ್ಟಿಲಲ್ಲಿ ಹಾಯಾಗಿ ಮಲಗಿತ್ತು. ಇದನ್ನು ನೋಡಿಯೂ ಕರಗದ ಅಂಜಲಿ ಪೂತನಿಯಂತೆ ಮಗುವನ್ನು ಎತ್ತಿ, ಲಾಲಿ ಹಾಡುತ್ತಾ ಕೊನೆಗೆ ಪಕ್ಕದ ಸರೋರವರಕ್ಕೆ ಎಸೆದೇಬಿಟ್ಟಳು.
ಅದೇ ದಿನ ಮಂಗಳವಾರ ತಡರಾತ್ರಿಯಲ್ಲಿ, ಹೆಡ್‌ಕಾನ್ಸ್‌ಟೇಬಲ್ ಗೋವಿಂದ್ ಶರ್ಮಾ ಗಸ್ತು ತಿರುಗುವ ಸಂದರ್ಭದಲ್ಲಿ ಅಜ್ಮೀರ್‌ನ ರಸ್ತೆಯಲ್ಲಿ ಒಬ್ಬ ಮಹಿಳೆ ಮತ್ತು ಪುರುಷ ಪರಸ್ಪರ ಮಾತಾಡುತ್ತಿರುವುದನ್ನು ಕಂಡು ಕೊಂಡು ಪರಿಚಯ ಕೇಳಿದರು. ಆಗ ಆಕೆ ತನ್ನನ್ನು ಅಂಜಲಿ ಅಲಿಯಾಸ್ ಪ್ರಿಯಾ ಎಂದು ಗುರುತಿಸಿಕೊಂಡು, “ನಾನು ಮಗಳೊಂದಿಗೆ ಮನೆಯಿಂದ ಹೊರಟೆ, ಆದರೆ ಮಗು ದಾರಿಯಲ್ಲಿ ಕಣ್ಮರೆಯಾಯಿತು” ಎಂದು ಹೇಳಿದಳು.

ಮಗಳು ಕಾಣೆಯಾದರೆಂದು ನಟಿಸಿದ ಅಂಜಲಿ ಮತ್ತು ಸಂಗಾತಿ ರಾತ್ರಿಯಿಡೀ ಮಗುವಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಓಳು ಬಿಟ್ಟಿದ್ದಾಳೆ.
ಸಿಸಿಟಿವಿ ಬಯಲುಮಾಡಿದ ಸತ್ಯ
ಪೊಲೀಸರು ಅನಾ ಸಾಗರ್ ಸರೋವರದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅಂಜಲಿ ತನ್ನ ಮಗಳನ್ನು ತೋಳಲ್ಲಿ ಹೊತ್ತುಕೊಂಡು ಸರೋವರದ ಬಳಿಯಲ್ಲಿ ಓಡಾಡುತ್ತಿರುವುದು. ರಾತ್ರಿ 1.30ಕ್ಕೆ ಮಗಳನ್ನು ಬಿಟ್ಟು ಒಬ್ಬಳೇ ಮೊಬೈಲ್‌ನಲ್ಲಿ ನಿರತರಾಗಿರುವುದು ಕಾಣಿಸಿತು. ಹೀಗಾಗಿ ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು.
ಶವ ಪತ್ತೆ
ಮರುದಿನ ಬೆಳಿಗ್ಗೆ ಬುಧವಾರ, ಪೊಲೀಸರು ಮಗುವಿನ ಶವವನ್ನು ಸರೋವರದಿಂದ ಹೊರತೆಗೆಯಿದರು. ವಿಚಾರಣೆಯಲ್ಲಿ ಅಂಜಲಿ ತತ್ತರಿಸಿ, ತನ್ನ ಮಗಳನ್ನು ಸರೋವರಕ್ಕೆ ಎಸೆದು ಕೊಂದಿರುವುದಾಗಿ ಒಪ್ಪಿಕೊಂಡಳು. ಅಂಜಲಿ, ತನ್ನ ಲಿವ್-ಇನ್ ಸಂಗಾತಿ ಅಲ್ಕೇಶ್ ಜೊತೆ ಅಜ್ಮೀರ್‌ನಲ್ಲಿ ವಾಸಿಸುತ್ತಿದ್ದರು. ಅಲ್ಕೇಶ್, “ಮೊದಲ ಮದುವೆಯಿಂದ ಮಗಳು ಹೊಂದಿದ್ದೀಯೆ” ಎಂದು ಅವಳನ್ನು ನಿರಂತರವಾಗಿ ನಿಂದಿಸುತ್ತಿದ್ದನೆಂದು ಆರೋಪಿಸಲಾಗಿದೆ. ಈ ನಿಂದನೆಗಳಿಂದ ಬೇಸತ್ತು, ಅಂಜಲಿ ತನ್ನ ಮಗಳನ್ನು ಕೊಲ್ಲುವ ಕ್ರೂರ ನಿರ್ಧಾರ ತೆಗೆದುಕೊಂಡಿದ್ದಾಳೆ.
ಅಂಜಲಿ ಮೂಲತಃ ಉತ್ತರ ಪ್ರದೇಶದ ವಾರಣಾಸಿ ಮೂಲದವಳಾಗಿದ್ದು, ಪತಿಯಿಂದ ಬೇರ್ಪಟ್ಟ ನಂತರ ಅಜ್ಮೀರ್‌ನಲ್ಲಿ ಹೋಟೆಲ್‌ನಲ್ಲಿ ಸ್ವಾಗತಕಾರರಾಗಿ ಕೆಲಸ ಪ್ರಾರಂಭಿಸಿದರು. ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುವ ಅಲ್ಕೇಶ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಕ್ರಿಶ್ಚಿಯನ್ ಗಂಜ್ ಪೊಲೀಸರು ಅಂಜಲಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಕೇಶ್ ಮಗುವಿನ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.