ಡಿ.ಬಿ. ಲಕ್ವೆನ್ ಗಾರ್ಡೇನಿಯಾ ಯಲ್ಲಿ ಆರೋಗ್ಯ ತಪಾಸಣೆ ಶಿಬಿರ

ಮಂಗಳೂರು: ಮೆಡಿಕವರ್ ಆಸ್ಪತ್ರೆಯ ವತಿಯಿಂದ ಅಧ್ಯಕ್ಷರು ಶ್ರೀ ಧನ್ಬಲ್ ರಾಮ್ ಮತ್ತು ಕಾರ್ಯದರ್ಶಿ ಶ್ರೀ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ಡಿ.ಬಿ. ಲಕ್ವೆನ್ ಗಾರ್ಡೇನಿಯಾ ಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಶಿಬಿರದಲ್ಲಿ ಒಟ್ಟು 100 ಮಂದಿ ಭಾಗವಹಿಸಿ, ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದ ಒತ್ತಡ, ಶುಗರ್ ಪರೀಕ್ಷೆ ಹಾಗೂ ವೈದ್ಯರ ಸಲಹೆಗಳನ್ನು ಪಡೆದರು.

ಜನರಲ್ಲಿ ತಡೆಗಟ್ಟುವ ಆರೋಗ್ಯ ಸೇವೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮೆಡಿಕವರ್ ಆಸ್ಪತ್ರೆ ನಿಯಮಿತವಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ.

error: Content is protected !!