ಮಂಗಳೂರು: ಮಿಲಾಗ್ರಿಸ್ ಕಾಲೇಜು ಮತ್ತು ಯೂಸ್ಟ್ ಬುಕ್ಸ್ ಆರ್ (Used Books R )ನ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಪುಸ್ತಕ ಪ್ರದರ್ಶನ–ಮಾರಾಟ ಮೇಳ ‘ಮಿಲಾಗ್ರಿಸ್ ಬುಕ್ ಕ್ವೆಸ್ಟ್’ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುಸ್ತಕ ಓದುವುದು ಮೌಲ್ಯಯುತ ಜೀವನಕ್ಕೆ ದಾರಿ ತೋರಿಸುತ್ತದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಪುಸ್ತಕಗಳನ್ನು ತಲುಪಿಸುವುದೇ ನಮ್ಮ ಉದ್ದೇಶ. ಸೆಪ್ಟೆಂಬರ್ 16ರಿಂದ 21ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಶೈಕ್ಷಣಿಕ, ಸಾಹಿತ್ಯ, ಅಧ್ಯಾತ್ಮಿಕ, ಜೀವನಶೈಲಿ ಹಾಗೂ ಮಕ್ಕಳ ಪುಸ್ತಕಗಳೇ ಮುಖ್ಯವಾಗಿ ಇರಲಿವೆ” ಎಂದು ಹೇಳಿದರು.
ರುಣ್ ತೇಜಸ್ ಗಂಗಮ್ ಹಾಗೂ ತಕ್ಷಿಣಿ ಅಶೋಕ್ ಕುಮಾರ್ ಅವರು ಸಂಸ್ಥೆಯು ಓದುವ ಹವ್ಯಾಸವನ್ನು ಉತ್ತೇಜಿಸಲು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ Used Books R ಸಂಸ್ಥೆಯನ್ನು ಸ್ಥಾಪಿಸಿದ್ದು, ಮಂಗಳೂರು ಸಾರ್ವಜನಿಕರಿಗೆ ಈ ಬಾರಿ ವಿವಿಧ ವಿಭಾಗಗಳಲ್ಲೇ ಸುಮಾರು 3,000 ಕ್ಕೂ ಹೆಚ್ಚು ಶೀರ್ಷಿಕೆಗಳನ್ನು ನೀಡುತ್ತೇವೆ ಎಂದರು.
ಕಡಿಮೆ ದರದಲ್ಲಿ ಉತ್ತಮ ಪುಸ್ತಕಗಳನ್ನು ದೊರಕಿಸಿದರೆ ವಿದ್ಯಾರ್ಥಿಗಳ ಪಠನ ಚಟುವಟಿಕೆ ಹೆಚ್ಚುತ್ತದೆ. ಸಂಸ್ಥೆಗಳು ಮತ್ತು ಕಾಲೇಜುಗಳು ಈ ರೀತಿಯ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿದರೆ ಉತ್ತಮ ಆಯೋಜಕರು ತಿಳಿಸಿದರು.
ಲೈಬ್ರೇರಿಯನ್ – ಪ್ರಮೀಳಾ, ಹೋಟೇಲ್ ಮಾನೇಜ್ ಮೆಂಟ್ ಎಚ್ ಒಡಿ ಡೆನ್ ಜಿಲ್ ಡಿಕಾಸ್ಟಾ, ಕನ್ನಡ ಉಪನ್ಯಾಸಕಿ ಮಮತ ಉಪಸ್ಥಿತರಿದ್ದರು.