ಬಾನುಮುಸ್ತಾಕ್‌ ರದ್ದು ಅಭಿವ್ಯಕ್ತಿ ಸ್ವಾತಂತ್ರ್ಯವಾದರೆ ನಮ್ಮ ನಾಯಕರ ಎಫ್‌ಐರ್‌ ಕೂಡ ರದ್ದು ಮಾಡಿ-ಪ್ರತಾಪ್

ಬೆಂಗಳೂರು : 2025ರ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು. ಇದು ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಭಾರೀ ಹಿನ್ನಡೆಯಾಗಿದೆ. ಅರ್ಜಿ ವಜಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

‌ʻಈ ಭಾಷಣವನ್ನು ಕೋರ್ಟ್ ನ ಮುಂದಿಟ್ಟಿದ್ದೆವು, ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎನ್ನುವುದಾದರೆ, ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಬಹಳಷ್ಟು FIRಗಳನ್ನು ಕೂಡಲೇ ರದ್ದಾಗಬೇಕಾಗುತ್ತದೆʼ ಎಂದು ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.

ಪ್ರತಾಪ್‌ ಸಿಂಹ ಶೇರ್‌ ಮಾಡಿದ ಬಾನುಮುಸ್ತಾಕ್‌ ಭಾಷಣದ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್​ ವಜಾಗೊಳಿಸಿದೆ. ಯಾವುದೇ ಹಕ್ಕು ಉಲ್ಲಂಘನೆ ಆಗದ ಹಿನ್ನೆಲೆ ಪಿಐಎಲ್ ವಜಾಗೊಳಿಸಲಾಗಿದೆ.
ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಅವರಿಗೂ ಇಚ್ಚೆಯಿತ್ತು ಎಂದು ಅವ್ರೇ ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದೆಂದು ಎಜಿ ವಾದ ಮಂಡಿಸಿದ್ದರು.

error: Content is protected !!