ಬೆಂಗಳೂರು: ಸ್ಯಾಂಡಲ್‌ವುಡ್ ದಂಪತಿ ಉಪೇಂದ್ರ – ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿದ್ದಾಗಿ ಖುದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಲ್ಲದೆ, ಯಾರಾದರೂ ದುಡ್ಡು ಕೇಳಿದ್ರೆ ಕೊಡಬೇಡಿ ಎಂದು ದಂಪತಿ ಮನವಿ ಮಾಡಿದ್ದಾರೆ.
ಪ್ರಿಯಾಂಕಾ ಏನೋ ಒಂದು ಆರ್ಡರ್ ಮಾಡಿದ್ದರು. ಪ್ರಿಯಾಂಕಾ ಅವರಿಗೆ ಬೆಳಗ್ಗೆ ಒಂದು ನಂಬರ್ ಬಂದಿದೆ.ಯಾರೋ ಒಬ್ಬ ಹ್ಯಾಕರ್ ಫೋನ್ ಮಾಡಿ, ಅವರ ಅಕೌಂಟ್‌ನ್ನು ಹ್ಯಾಕ್ ಮಾಡಿದ್ದಾನೆ. ನನ್ನ ಕೈಯಿಂದಲೂ ಗೊತ್ತಿಲ್ಲದೆ ಪ್ರಿಯಾ ಕಾಲ್ ಮಾಡಿಸಿದ್ದಾರೆ. ನನ್ನ ಫೋನ್ ಮತ್ತು ಪ್ರಿಯಾ ಅವರ ಫೋನ್ ಹ್ಯಾಕ್ ಆಗಿದೆ. ನನ್ನ ಫೋನ್ ಹಾಗೂ ಪ್ರಿಯಾ ಅವರ ಫೋನಿನಿಂದ ದುಡ್ಡು ಕಳುಹಿಸುವ ಮೆಸೇಜ್ ಬಂದರೆ, ದಯವಿಟ್ಟು ಯಾರೂ ದುಡ್ಡು ಕಳಿಸೋಕೆ ಹೋಗಬೇಡಿ. ಆದಷ್ಟು ಬೇಗ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಉಪ್ಪಿ ಹೇಳಿದ್ದಾರೆ.
ಅದೇ ರೀತಿ ಪ್ರಿಯಾಂಕಾ ಕೂಡ, ಇದೇ ರೀತಿ ವಿಡಿಯೋ ಮಾಡಿದ್ದು, ನಮ್ಮ ಹೆಸರು ಬಳಸಿಕೊಂಡು ದುಡ್ಡ ಕೇಳಿದ್ರೆ ಕಳುಹಿಸಬೇಡಿ. ನನ್ನ ಫೋನ್ ಹ್ಯಾಕ್ ಆಗಿದೆ. ಈ ಬಗ್ಗೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡುತ್ತೇವೆ ಎಂದಿದ್ದಾರೆ.
ಪ್ರಿಯಾಂಕಾ ಅವರ ಖಾತೆಯಿಂದ ತುಂಬ ಮಂದಿಗೆ ದುಡ್ಡು ಹಾಕಿ ಎನ್ನುವ ಸಂದೇಶ ಹೋಗುತ್ತಿದೆ. ದಯವಿಟ್ಟು ಯಾರೂ ಕೂಡ ದುಡ್ಡು ಕಳುಹಿಸಬೇಡಿ ಎಂದಿದ್ದಾರೆ.