ಪುರುಷರ ಮುಕ್ತ ಕೇರಂ ಡಬಲ್ಸ್ ಪಂದ್ಯಾಟ – 2025 ಚಾಲನೆ !

ಹಳೆಯಂಗಡಿ: ಭಾರತ ಸರಕಾರ ಮೈ ಭಾರತ್, ದಕ್ಷಿಣ ಕನ್ನಡ ಯುವ ಸೇವಾ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಇವರುಗಳ ಸಹಯೋಗದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಆಶ್ರಯದಲ್ಲಿ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಯುಗಳ ಸoಯುಕ್ತ ಆಶ್ರಯದಲ್ಲಿ ಯುವತಿ ಮತ್ತು ಮಹಿಳಾ ಮಂಡಲ (ರಿ), ಹಳೆಯಂಗಡಿ ಇವರುಗಳ ಸಹಕಾರದಲ್ಲಿ “ಪುರುಷರ ಮುಕ್ತ ಕೇರಂ ಡಬಲ್ಸ್ ಪಂದ್ಯಾಟ- 2025” ದಿನಾಂಕ 14- 09- 2025 ಬೆಳಿಗ್ಗೆ 9.30 ಸ್ಪರ್ಧೆಯ ಯುವಕ ಮಂಡಲದ ಸಭಾಂಗಣದಲ್ಲಿ ಜರುಗಿತು.

ಕ್ರೀಡೆ ನಮ್ಮ ಜೀವನ ಕೌಶಲ್ಯದ ಒಂದು ಪ್ರಮುಖ ಭಾಗವಾಗಿದೆ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಯಶಸ್ವಿ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಮಾನಸಿಕ ಬೆಳವಣಿಗೆಯು ಶಾಲಾ ದಿನಗಳಿಂದ ಪ್ರಾರಂಭವಾಗುತ್ತದೆ, ಆದರೆ ದೈಹಿಕ ಬೆಳವಣಿಗೆಗೆ ವ್ಯಾಯಾಮವು ಕ್ರೀಡೆಯ ಮೂಲಕ ನಾವು ಪಡೆಯುತ್ತೇವೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಸುಧೀರ್ ಡಿ ಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ವಹಿಸಿ, ಯುವಕ ಮಂಡಲವು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅನೇಕ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ಪಡೆದಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಾನಂದ್ ಚೆಳ್ಯಾರು ಅಧ್ಯಕ್ಷರಾದ ಗ್ರಾಮ ಪಂಚಾಯತ್ ಚೆಳ್ಳಾರು ಕಾರ್ಯಕ್ರಮಕ್ಕೆ ಅಭಿನಂದಿಸಿದರು.

ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಕಿರಣ್ ರಾಜ್ ಬಿ, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ರಜತ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿ.ಕೋಸ್ತ, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ರಶ್ವಿತಾ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಹಳೆಯಂಗಡಿ , ಪಡುಪಣಂಬೂರು, ಕೆಮಾಲ್ ,ಚೆಳ್ಯಾರು ಪಂಚಾಯತ್ ವ್ಯಾಪ್ತಿಯ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದರು. ಆಗಮಿಸಿದ ಎಲ್ಲ ಸ್ಪರ್ಧಾಳುಗಳಿಗೆ ಊಟ ಮತ್ತು ಉಪಾಹಾರಗಳನ್ನು ನೀಡಲಾಗಿತ್ತು.

ಯುವತಿ ಮಂಡಲದ ಕೋಶಾಧಿಕಾರಿ ಕುಮಾರಿ ನಿರ್ಮಿತ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ  ಯುವಕ ಮಂಡಲದ ಶ್ರೀ ರಾಮ್‌ದಾಸ್ ಪಾವಂಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಶ್ರೀ ಯತೀಶ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ರಜತ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿ.ಕೋಸ್ತ, ವಂದಿಸಿದರು.

error: Content is protected !!