ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಯು ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಧಾನಿ ನೆತನ್ಯಾಹು ಅವರೊಂದಿಗೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯು ಅತ್ಯಂತ ಯಶಸ್ವಿಯಾಗಿದ್ದು, ಭಾರತದ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಹಲವು ಮಹತ್ವದ ತಿಳುವಳಿಕಾ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದೆ.

ಇತ್ತ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ “ಭಾರತವಿಲ್ಲದೆ ಮಧ್ಯಪ್ರಾಚ್ಯಕ್ಕೆ ಭವಿಷ್ಯವೇ ಇಲ್ಲ” ಅಂತ ಬಹಿರಂಗವಾಗಿ ಹೇಳ್ತಿದ್ದಾರೆ. ಸಂಜೆ ಜಂಟಿ ಔತಣಕೂಟಕ್ಕೆ ಮೊದಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯಾರಿಗೂ ಗೊತ್ತಿಲ್ಲದ ಹಾಗೆ ಅಪ್ಪಟ ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಿ ಮೋದಿಯವರ ಮುಂದೆ ಬಂದು ನಿಂತಾಗ, ಮೋದಿ ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ನೆತನ್ಯಾಹು ಹಿಂದಿಯಲ್ಲಿ ಟ್ವೀಟ್ ಮಾಡಿ “ನನ್ನ ಗೆಳೆಯ ಮೋದಿಗೆ ನಾನು ಸರ್ಪ್ರೈಸ್ ಕೊಟ್ಟೆ” ಅಂತ ಬರೆದುಕೊಂಡಿದ್ದಾರೆ.

ಮೋದಿ ಬರಿ ಒಪ್ಪಂದಗಳಿಗೆ ಸಹಿ ಹಾಕಲು ಮಾತ್ರವಲ್ಲದೆ, ಹತ್ಯಾಕಾಂಡದ ಕರಾಳ ನೆನಪಿನ ‘ಯಾದ್ ವಶೇಮ್’ ಸ್ಮಾರಕಕ್ಕೆ ಭೇಟಿ ನೀಡಿ ಮೌನವಾಗಿ ಪ್ರಾರ್ಥಿಸಿದ್ದಾರೆ. ಇಸ್ರೇಲ್‌ನಲ್ಲಿರುವ ಕೇರಳದ ಕೇರ್-ಗಿವರ್ಸ್ ಹೆಣ್ಣುಮಕ್ಕಳು ಸಾಂಪ್ರದಾಯಿಕ ‘ತಿರುವತಿರ’ ನೃತ್ಯ ಮಾಡಿದ್ದಾರೆ.
ಈ ಭೇಟಿಯ ನಂತರ ಭಾರತ ಮತ್ತು ಇಸ್ರೇಲ್ ನಡುವೆ ರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಇಸ್ರೇಲ್‌ನ ಹೈಟೆಕ್ ತಂತ್ರಜ್ಞಾನ ಇನ್ಮುಂದೆ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ನಮ್ಮ ದೇಶದಲ್ಲೇ ತಯಾರಾಗಲಿದೆ. ಕೇವಲ ಶಸ್ತ್ರಾಸ್ತ್ರ ಮಾತ್ರವಲ್ಲ, ಹನಿ ನೀರಾವರಿಯಿಂದ ಹಿಡಿದು ಸೈಬರ್ ಸೆಕ್ಯೂರಿಟಿವರೆಗೆ ಇಸ್ರೇಲ್ ಭಾರತದ ಬೆನ್ನಿಗೆ ನಿಲ್ಲಲಿದೆ. ಜಗತ್ತಿನ ರಾಜಕೀಯ ನಕ್ಷೆಯಲ್ಲಿ ಇನ್ಮುಂದೆ ‘ಇಂಡಿಯಾ-ಇಸ್ರೇಲ್’ ಜೋಡಿ ಅಜೇಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.
