ಫೆ.28-ಮಾ.17 ದ್ವಿತೀಯ ಪಿಯುಸಿ ಪರೀಕ್ಷೆ; ನಿಷೇಧಾಜ್ಞೆ ಜಾರಿ

ಮಂಗಳೂರು: ದ್ವಿತೀಯ ಪಿಯುಸಿ-1 ವಾರ್ಷಿಕ ಪರೀಕ್ಷೆಗಳು ಫೆ. 28 ರಿಂದ ಮಾ.17ರ ವರೆಗೆ ನಡೆಯಲಿದೆ.

ಪರೀಕ್ಷೆ ನಡೆಯುವ ಸಮಯ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಶಾಂತಿಯುತವಾಗಿ, ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಮತ್ತು ಸಮೀಪದಲ್ಲಿರುವ ಜೆರಾಕ್ಸ್‌ ಮತ್ತು ಕಂಪ್ಯೂಟರ್‌/ ಸೈಬರ್‌ಅಂಗಡಿಗಳನ್ನು ಮುಚ್ಚಿಸಲು ಉಪ ಪೊಲೀಸ್‌ ಆಯುಕ್ತ ಮಿಥುನ್‌ ಎಚ್‌.ಎನ್‌. ಆದೇಶಿಸಿದ್ದಾರೆ.

ದ್ವಿತೀಯ ಪಿಯುಸಿ-1 ವಾರ್ಷಿಕ ಪರೀಕ್ಷೆ ಮಂಗಳೂರು, ಮೂಡುಬಿದಿರೆ, ಉಳ್ಳಾಲ ಮತ್ತು ಮೂಲ್ಕಿ ತಾಲೂಕಿನ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

error: Content is protected !!