ಪಣಂಬೂರು: ಬೈಕ್ ಗೆ ಲಾರಿ ಡಿಕ್ಕಿ; ಅಂಕೋಲ ಮೂಲದ ಯುವಕ ಸ್ಪಾಟ್ ಡೆತ್!

ಸುರತ್ಕಲ್: ಲಾರಿ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಮುಂಭಾಗ ನಡೆದಿದೆ.
ಮೃತರನ್ನು ಮೂಲತಃ ಅಂಕೋಲ ನಿವಾಸಿ ಸದ್ಯ ಮಂಗಳೂರು ಬಿಜೈನ ಬಾಡಿಗೆ ಮನೆಯಲ್ಲಿ ವಾಸ ವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಗುರುತಿಸಲಾಗಿದೆ.
ಶಿವದಾಸ್ ಗಣಪತಿ ನಾಯ್ಕ ಅವರು ಬೈಕಂಪಾಡಿಯ ಫಾರ್ಮ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು , ಕೆಲಸ ಮುಗಿಸಿಕೊಂಡು ಬಿಜೈನ ತನ್ನ ಮನೆಕಡೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಶಿವದಾಸ್ ಗಣಪತಿ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

error: Content is protected !!