ಧರ್ಮಸ್ಥಳ ಸೇವಾನಿರತೆಗೆ ಲೈಂಗಿಕ ಕಿರುಕುಳ: ಧರ್ಮಸ್ಥಳ ಯೋಜನೆ ಜನಜಾಗೃತಿ ಸಮಿತಿ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷನ ಬಂಧನಕ್ಕೆ ಹೆಚ್ಚಿದ ಆಗ್ರಹ

ಕುಂದಾಪುರ: ರಟ್ಟಾಡಿಯ ರಟ್ಟೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಧರ್ಮಸ್ಥಳ ಯೋಜನೆಯ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಎಂಬಾತ ಧರ್ಮಸ್ಥಳದ ಧರ್ಮಸಂರಕ್ಷಣಾ ಕಾರ್ಯಕ್ರಮದ ಆಮಂತ್ರಣ ಕೊಡಲು ಮನೆಗೆ ಬಂದಿದ್ದ ಸಂಘದ ಸೇವಾನಿರತೆಗೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಆರೋಪಿ ನವೀನ್ ಚಂದ್ರಶೆಟ್ಟಿ ಪರ ನಿಂತು ಪಂಚಾಯಿತಿ ಮಾಡಲು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿರುವುದು ತಿಳಿದುಬಂದಿದೆ, ಇದು ಖಂಡನೀಯವಾಗಿದ್ದು, ಆರೋಪಿ ನವೀನ್ ಚಂದ್ರ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ದೂರು ನೀಡಿರುವುದರಿಂದ ತಕ್ಷಣವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಆ ಮೂಲಕ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !!