ಸುರತ್ಕಲ್: ಸಾದಾತ್ ಮದಾರಿ ಫೌಂಡೇಶನ್ ಹಾಗೂ ಸಾದಾತ್ ವಲಿಯ್ಯ ಝಿಕ್ ಸ್ವಲಾತ್ ಮಜ್ಲಿಸ್, ಕೆರೆಕಾಡು–ಮುಲ್ಕಿ ಇವರ 22ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ಮೆಹಫಿಲೇ ಮದೀನ ಸೂಫಿ ಕವಾಲಿ ಕಾರ್ಯಕ್ರಮ ರವಿವಾರ ಮಗ್ರಿಬ್ ನಮಾಝ್ ನಂತರ ಚೊಕ್ಕಬೆಟ್ಟು ಎಂ.ಜೆ.ಎಂ. ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಚೊಕ್ಕಬೆಟ್ಟು ಅವರು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಟಿ. ಮುಹಮ್ಮದ್ ಚೊಕ್ಕಬೆಟ್ಟು ವಹಿಸಿದ್ದರು. ಹಝ್ರತ್ ಸಾದಾತ್ ಜುಮಾ ಮಸೀದಿಯ ಖತೀಬ್ ತ್ವಯಿಬ್ ಫೈಝಿ ಬೊಳ್ಳೂರು ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಮನ್ಸೂರ್ ಪೂತನತ್ತಾನಿ ಮತ್ತು ಬಳಗದವರು ಸೂಫಿ ಕವಾಲಿಯನ್ನು ಮನಮೋಹಕವಾಗಿ ನಡೆಸಿಕೊಟ್ಟು ಶ್ರೋತೃಗಳನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದರು. ಅಸಯ್ಯಿದ್ ಹಾಶಿಮ್ ಬಾಖವಿ ಬಾಅಲವಿ ತಂಙಳ್ ಕೊರಿಂಗಿಲಾ ಅವರು ದುಆ ನೆರವೇರಿಸಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕೊಡಗು ಅಲ್ ಅಮಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉನೈಸ್ ಪೆರಾಜೆ, ಹಾಗೂ ಆ್ಯಂಬುಲೆನ್ಸ್ ಚಾಲಕ ಅಹ್ಮದ್ ನಾಸೀರ್ (ಮಂಗಳೂರು) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕೃಷ್ಣಾಪುರ ಮಸ್ಜಿದುಲ್ ಹುದಾ ಜುಮಾ ಮಸೀದಿಯ ಖತೀಬ್ ಬಿಶ್ರ್ ಯಮಾನಿ, ಕನ್ನಡ ಶಾಲೆ ಉಳಿಸಿ ಸಂಘಟನೆಯ ಮೊಯ್ದಿನ್ ಬಜ್ಪೆ, ಎಂ.ಜೆ.ಎಂ. ಅಧ್ಯಕ್ಷ ಅಬ್ದುಲ್ ಅಝೀಝ್, ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶಮೀರ್ ಕಾಟಿಪಳ್ಳ, ಕೆ.ಎಂ. ಶಾಹುಲ್ ಹಮೀದ್, ಐ.ಬಿ. ಇಮ್ತಿಯಾಝ್ ಇಡ್ಯಾ, ನೂರ್ ಮುಹಮ್ಮದ್ ಚೊಕ್ಕಬೆಟ್ಟು, ಶಂಸುದ್ದೀನ್ ಹೊಸಕಾಡು, ಹನೀಫ್ ಇಡ್ಯಾ, ನಿಸಾರ್ ಅಹ್ಮದ್ ಅಂಗರಗುಡ್ಡೆ, ನಮ್ಮನಾಡು ಒಕ್ಕೂಟದ ಅಧ್ಯಕ್ಷ ರಶೀದ್ ಕಾಪು, ಸುರತ್ಕಲ್ ವಲಯ ಐಕ್ಯತಾ ವೇದಿಕೆಯ ಅಧ್ಯಕ್ಷ ಆಶ್ರಫ್, ಅಶ್ರಫ್ ಬದ್ರಿಯಾ, ಕಮಲ್ ಚೊಕ್ಕಬೆಟ್ಟು, ಇಮ್ತಿಯಾಝ್ ಚೊಕ್ಕಬೆಟ್ಟು, ಶಾಝ್ ಕೊಲ್ನಾಡು, ಶಿಹಾಬುದ್ದೀನ್ ಚೊಕ್ಕಬೆಟ್ಟು, ಸಾದಾತ್ ಮದಾರಿ ಫೌಂಡೇಶನ್ ಸಂಸ್ಥಾಪಕ ಮುಹಮ್ಮದ್ ಶಾಫಿ ಮದಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆರೆಕಾಡು ಸ್ವಾಗತಿಸಿದರು. ಮಾಸ್ಟರ್ ಶಾಮಿಲ್ ಅವರು ಪವಿತ್ರ ಕುರ್‌ಆನ್ ಕಿರಾಅತ್ ಪಠಿಸಿದರು.