ಮಂಗಳೂರು: ಲೋಕಾನುಗ್ರಹಿ ಹಝ್ರತ್ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮಾರ 1500ನೆಯ ಜನ್ಮ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಮತ್ತು ಸಮಸ್ತದ ಎಲ್ಲಾ ಪೋಷಕ ಸಂಘಟನೆಗಳು ಸೇರಿ ತೀರ್ಮಾನಿಸಿದ್ದು, ಸೆ.9ರಂದು ಗ್ರಾಂಡ್ ಮೀಲಾದ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಸ್ತ ಸಂಘಟನೆಗಳ ಇಷ್ಕೇ ರಸೂಲ್ ಮೀಲಾದ್ ಸ್ವಾಗತ ಸಮಿತಿಯ ಸ್ವಾಗತ ಸಮಿತಿ ಸಂಚಾಲಕ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಸಮಸ್ತ ಕರ್ನಾಟಕ ಮಶಾವರ, ಎಸ್.ವೈ.ಎಸ್. ಎಸೈ.ಎಸ್.ಎಸ್.ಎಫ್ ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್, ಮದರಸ ಮೇನೇಜೆಂಟ್, ಜಂಇಯ್ಯತುಲ್ ಮುದರಿಸೀನ್, ಜಂಇಯ್ಯತುಲ್ ಖುತಬಾ, ಸಮಸ್ತ ಬಾಲ ವೇದಿ ಸಂಯುಕ್ತ ವಾಗಿ ಸೆ.9ರಂದು ಪುರಭವನದಲ್ಲಿ ಇಷ್ಕೇ ರಸೂಲ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಬಾವುಟ ಗುಡ್ಡೆಯಿಂದ ಆರಂಭಗೊಂಡ ಮೀಲಾದ್ ಜಾಥಾ ಜ್ಯೋತಿ ಸರ್ಕಲ್ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪಲಿದೆ.ಆ ನಂತರ ಸಮಸ್ತ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಝನುಲ್ ಅಜಿದೀನ್ ತಂಬಳ್, ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ಹಾಗೂ ಉಸ್ಮಾನುಲ್ ಫೈಝಿ, ಕರ್ನಾಟಕ ಸರಕಾರದ ಘನತೆವೆತ್ತ ಸ್ಪೀಕರ್ ಶ್ರೀಯುತ ಯು ಟಿ ಖಾದರ್, ಜಿಎಮ್ ಫಾರೂಖ್ ಬೆಂಗಳೂರು, ಇನಾಯತ್ ಆಲಿ ಮುಲ್ಕಿ, ಇಷ್ಟಿಕಾರ್ ಅಲಿ ಅಲ್ಲದೇ ಸಮಸ್ತ ಸಂಘಟನೆಗಳ ಉಲಮಾ ಉಮರಾ ನಾಯಕರು, ಕಾರ್ಯಕರ್ತರು ಭಾಹವಹಿಸಲಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸ್ವಮಿತಿ ರಚಿಸಲಾಗಿದ್ದು, ಬಹು ಉಸ್ಮಾನುಲ್ ಫೈಝಿ ಉಸ್ತಾದ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜನರಲ್ ಕಣ್ಣೀನರ್ ಯು.ಕೆ. ಅಬ್ದುಲ್ ಆಝೀಝ್ ದಾರಿಮಿ ಹಾಗೂ ಖಜಾಂಜಿ ರಫೀಕ್ ಹಾಜಿ ಕೊಡಾಜೆ. ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ಕೋಡಿನೇಟರ್ ಆಗಿ ಇಸ್ಮಾಯಿಲ್ ಯಮಾನಿ ವರ್ಕಿಂಗ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರವಾದಿ ಪ ಸಲ್ಲಲ್ಲಾಹು ಅಲೈಹಿವಸಲ್ಲಮಾ ರವರ ಅನುಪಮ ಮಾನವೀಯ ಮೌಲ್ಯಗಳನ್ನು ಪ್ರಚಾರ ಪಡಿಸುವುದು, ಸಾಮಾಜಿಕ ಕೋಮು ಸಾಮರಸ್ಯವನ್ನು ಕಾಪಾಡುವುದು ಹಾಗೇ ಮಾದಕತೆ ಯಂತಹಾ ಅನಿಷ್ಟ ದುಷ್ಟಟಗಳ ಬಗ್ಗೆ ಯುವ ಸಮಾಜದಲ್ಲಿ ಜಾಗ್ರತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ಮುರಾವರ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಸ್ವಾಗತ ಸಮಿತಿಯ ಚೇರ್ಮನ್ ಕೆ ಎಮ್ ಉಸ್ಮಾನುಲ್ ಫೈಝಿ, ಸ್ವಾಗತ ಸಮಿತಿ ಕೋರ್ಡಿನೇಟರ್ ಕೆ.ಎಲ್ ಉಮರ್ ದಾರಿಮಿ, ಸ್ವಾಗತ ಸಮಿತಿ ಖಜಾಂಚಿ ರಫೀಕ್ ಹಾಜಿ ಕೊಡಾಜೆ, SYS ನಾಯಕ ಹಕೀಂ ಪರ್ತಿಪ್ಪಾಡಿ , ವರ್ಕಿಂಗ್ ಕಾರ್ಯದರ್ಶಿ ಸ್ವಾಗತ ಸಮಿತಿಯ ಇಸ್ಮಾಯಿಲ್ ಯಮಾನಿ ಹಾಗೂ ಮದ್ರಸ ಮ್ಯಾನೇಜೈಟ್ ಅಧ್ಯಕ್ಷ ಹಸನಬ್ಬ ಫರಂಗಿಪೇಟೆ ಉಪಸ್ಥಿತರಿದ್ದರು.