ಮಂಗಳೂರಿಗೂ ಉದ್ಯಮ ವಿಸ್ತರಿಸಿದ ರೆಸ್ಟೊಲೆಕ್ಸ್, ನೋವಾ ಸ್ಲೀಪ್ ಕಂಫರ್ಟ್ಸ್ ಸಹಭಾಗಿತ್ವದಲ್ಲಿ ನೂತನ ಮಳಿಗೆ ಶುಭಾರಂಭ

ಮಂಗಳೂರು: ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸ್ಟೊಲೆಕ್ಸ್, ಮಂಗಳೂರಿನ ಬಲ್ಲಾಳ್‌ ಬಾಗ್‌ನಲ್ಲಿ ತನ್ನ ಹೊಸ ವಿಶೇಷ ಫ್ರಾಂಚೈಸಿ ಮಳಿಗೆಗೆ ಇಂದು(ಸೆ.5) ಚಾಲನೆ ನೀಡಲಾಗಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ ಎಂದು ಸಂಸ್ಥೆಯ ಪಾಲುದಾರರಾದ ವಿಜಯ ಕಾಮತ್‌ ಹೇಳಿದರು.

850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೊಲೆಕ್ಸ್ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು, ಬೆಡ್‌ಶೀಟ್‌ಗಳು, ಕಂಫರ್ಟ‌ರ್‌ ಗಳು, ಹಾಸಿಗೆ ಕವರ್‌ಗಳು, ದಿಂಬು ಮತ್ತಿತರ ಉತ್ಪನ್ನಗಳು ಸೇರಿವೆ. ರೆಸ್ಟೊಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮಾತಾನಾಡಿದ ಅವರು, ʻರೆಸ್ಟೊಲೆಕ್ಸ್ ನಾಲ್ಕು ದಶಕಗಳಿಂದ ಗ್ರಾಹಕರ ಅನುಭವಗಳನ್ನು ಹೆಚ್ಚಿಸುವುದು ಮತ್ತು ಸೂಕ್ತ ಆಯ್ಕೆಗಳನ್ನು ಬೆಂಬಲಿಸುವತ್ತ ಗಮನಹರಿಸಿದೆ. ಮಂಗಳೂರಿನಲ್ಲಿರುವ ಈ ಹೊಸ ಫ್ರಾಂಚೈಸಿ ಮಳಿಗೆಯು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದೆ’ ಎಂದರು.

ಕಾರ್ಯಕ್ರಮದಲ್ಲಿ ರೆಸ್ಟೊಲೆಕ್ಸ್ ಸಿಇಒ ಸುರೇಶ್ ಬಾಬು ಉಪಸ್ಥಿತರಿದ್ದರು.

ರೆಸ್ಟೊಲೆಕ್ಸ್ ಪ್ರಸ್ತುತ ಭಾರತದಾದ್ಯಂತ 85 ಮಳಿಗೆಗಳನ್ನು, ದೇಶಾದ್ಯಂತ 3,500 ಅಧಿಕೃತ ವಿತರಕರನ್ನು ಮತ್ತು ಕರ್ನಾಟಕದಲ್ಲಿ 1,100 ಅಧಿಕೃತ ವಿತರಕರನ್ನು ಹೊಂದಿದ್ದು ಮಂಗಳೂರಿನಲ್ಲಿ ಗ್ರಾಹಕರಿಗೆ ಬೇಡಿಕೆಗೆ ತಕ್ಕಂತೆ ನವನವೀನ ಮಾದರಿಯ ಹಾಸಿಗೆಗಳ ಶ್ರೇಣಿಗಳನ್ನು ಪೂರೈಸಲು ಸಜ್ಜಾಗಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

error: Content is protected !!