ಮಂಗಳೂರು ಪಾಲಿಕೆಯಲ್ಲಿ ಕನ್ನಡ ಬರೆಯಲು ಬಾರದ ಅಧಿಕಾರಿ! ಕನ್ನಡಪರ ಸಂಘಟನೆಗಳ ಕಿಡಿ!!

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡ ಓದಲು ಬರೆಯಲು ಬಾರದ ಅಧಿಕಾರಿ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ. ಕೇರಳ ಮೂಲದ ಮಹಿಳೆಯು ಕೇರಳದ ಮಲಯಾಳಂ ಮಾಧ್ಯಮದಲ್ಲಿ ವಿಧ್ಯಾಭ್ಯಾಸವನ್ನು ಮಾಡಿರುವುದು ಕನ್ನಡ, ತುಳು ಭಾಷೆ ಬಾರದಿರುವುದು ಜನಸಾಮಾನ್ಯರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಕನ್ನಡ ಸಂಘಗಳ ಆಕ್ರೋಶವಾಗಿದೆ. ಕೆ.ಸಿ.ಎಸ್.ಆರ್ ನಿಯಮಗಳು 1974ರಲ್ಲಿ ಸರಕಾರಿ SSLC/10ನೇ ತರಗತಿಯಲ್ಲಿ ಕನ್ನಡ ಭಾಷೆ ವಿಷಯವನ್ನು ಓದಿರಬೇಕು ಅಥವಾ ತತ್ಸಮಾನ ನೌಕರಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿಯಮವಿದೆ. ಈ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಕನ್ನಡ ಭಾಷೆಯ ಸಾಮಾನ್ಯ ಪರಿಜ್ಞಾನವಿಲ್ಲದ ಮಲಯಾಳಿ ಮಹಿಳೆಯನ್ನು ಯಾವುದೋ ರಾಜಕೀಯ ಒತ್ತಡ ಹಾಗೂ ದುರುದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಕಾನೂನು ಅಧಿಕಾರಿಯಾಗಿ ನೇಮಕ ಮಾಡಲು ಹೊರಟಿರುವುದು ಕನ್ನಡ ನಾಡು ಹಾಗೂ ಕನ್ನಡ ಭಾಷೆಗೆ ಮಾಡುವ ಅಗೌರವ, ಅವಮಾನ ಹಾಗೂ ಈ ಕನ್ನಡ ನಾಡಿನ ಕಾನೂನಿನಡಿಯಲ್ಲಿ ಅಕ್ಷಮ್ಯ ಅಪರಾಧವಾಗಿರುತ್ತದೆ ಎಂಬ ಆರೋಪ ಕೇಳಿಬಂದಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಕಡತಗಳು ಕನ್ನಡ ಭಾಷೆಯಲ್ಲಿದ್ದು ದೈನಂದಿನ ವ್ಯವಹಾರವು ಕನ್ನಡ ಭಾಷೆಯಲ್ಲಿ ನಡೆಯುವುದರಿಂದ ಮಲಯಾಳಿ ಮೂಲದ ಕನ್ನಡ ಬರೆಯಲು ಓದಲು ಬಾರದ ಮಹಿಳೆಯನ್ನು ನೇಮಿಸಿದರೆ ಯಾವುದೇ ಕೆಲಸ ಕಾರ್ಯ ನಿರ್ವಹಿಸಲು ಅಸಾಧ್ಯವಾಗುತ್ತದೆ. ಇದರಿಂದಾಗಿ ಪಾಲಿಕೆಯ ಬೊಕ್ಕಸಕ್ಕೆ ಅನಗತ್ಯ ನಷ್ಟ ಉಂಟಾಗಿ ಪಾಲಿಕೆಗೆ ಯಾವುದೇ ಪ್ರಯೋಜನವಿಲ್ಲದೆ ಪಾಲಿಕೆಯ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ.ಇದರಿಂದಾಗಿ ಕರ್ನಾಟಕದ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗಿದ್ದು ಈ ಕಾನೂನು ಬಾಹಿರ ನೇಮಖಾತಿಯನ್ನು ರದ್ದುಗೊಳಿಸಿ ನಿಯಮಾನುಸಾರ ಕನ್ನಡ ಭಾಷೆಯಲ್ಲಿ ಪರಿಣಿತರಿರುವ ಅರ್ಹ ಕರ್ನಾಟಕದ ಸ್ಥಳೀಯ ಅರ್ಹ ಅಭ್ಯರ್ಥಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾನೂನು ಅಧಿಕಾರಿಯಾಗಿ ನೇಮಿಸಬೇಕು ಎಂಬುದು ಕನ್ನಡ ಹೋರಾಟಗಾರರ ಆಗ್ರಹವಾಗಿದೆ.

error: Content is protected !!