ಕಲಾ ಸಂಭ್ರಮ ಸೂರಿಂಜೆ ವತಿಯಿಂದ ಸಾರ್ವಜನಿಕ ಶ್ರೀ ಕೃಷ್ಣ ವೇಷ ಸ್ಪರ್ದೆ !

ಮಂಗಳೂರು: ಕಲಾ ಸಂಭ್ರಮ ಸೂರಿಂಜೆ ಇದರ ವತಿಯಿಂದ ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದ್ವೀತಿಯ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ವೇಷ ಸ್ಪರ್ದೆಯು ನಡೆಯಿತು. ಸ್ಪರ್ಧೆಯಲ್ಲಿ  ಸುಮಾರು 140 ಸ್ಪರ್ಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ  ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣರವರು ಚಾಲನೆ ನೀಡಿದರು.

ವೇದಿಕೆಯಲ್ಲಿ ವಿನಯಕುಮಾರ್ ಸೂರಿಂಜೆ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಮನೋಹರ ಶೆಟ್ಟಿ ಸೂರಿಂಜೆ, ಸುಧಾಕರ ಶೇಣವ,ರಾಧಾಕೃಷ್ಣ ಭಂಡಾರ್ಕರ್,ದಿವಾಕರ ಶೆಟ್ಟಿ ಕುಲ್ಲಂಗಾಲು, ದಿನೇಶ್ ಶೆಟ್ಟಿ ನಾಯರ್ ಕೋಡಿ,ಜಗನ್ನಾಥ ಶೆಟ್ಟಿ ತೇವು ಸೂರಿಂಜೆ, ರಮೇಶ್ ಶೆಟ್ಟಿ ಕುಲ್ಲಂಗಾಲು, ಶಶಿಧರ ಶೆಟ್ಟಿ ಸೂರಿಂಜೆ, ಜಯಪ್ರಕಾಶ್ ಸೂರಿಂಜೆ, ನೃತ್ಯ ಸಂಯೋಜಕಿ ಶೈಲಜಾ ಮಧ್ಯ, ಶಶಿಕಲಾ ಶೆಟ್ಟಿ ನಾಯರ್ ಕೋಡಿ,ಪದ್ಮಾವತಿ ಶೆಟ್ಟಿ, ಗಿರೀಶ್ ಪೂಜಾರಿ ಕೋಟೆ,ಕಿರಣ್ ಅಚಾರ್ಯ ಹೊಸಬೆಟ್ಟು, ಜೀತೆಂದ್ರ ಶೆಟ್ಟಿ ಶಿಬರೂರು,ಜಯಶೀಲ ಸೂರಿಂಜೆ, ಪ್ರವೀಣ್ ಶೆಟ್ಟಿ ಶಿಬರೂರು,ಸುಕೇಶ್ ಶೆಟ್ಟಿ ಬೈಲಗುತ್ತು, ದೇವಿ ಕಿರಣ್ ಗಣೇಶಪುರ, ಅಶ್ವಥ್ ಪೂಜಾರಿ,ಪಾರ್ವತಿ ಕೋಟೆ,ವಸುದಾ ಶೆಟ್ಟಿ, ಕುಸುಮಾಕರ ಶೆಟ್ಟಿ ಕುತ್ತೆತ್ತೂರು,ನರೇಶ್ ಕುಮಾರ್ ಸಸಿಹಿತ್ಲು, ಪ್ರಮೀಳ ದೀಪಕ್ ಪೆರ್ಮುದೆ,ಪೂಜಾ ಯು ಕಾಂಚನ್ ಹೊಸಬೆಟ್ಟು, ಮುಂತಾದವರು ಉಪಸ್ಥಿತರಿದ್ದರು.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಕಲಾ ಸಂಭ್ರಮ ಸೂರಿಂಜೆ ಇದರ ಸಂಘಟಕ ವಿಘ್ನೇಶ್ ಸೂರಿಂಜೆ ಸ್ವಾಗತಿಸಿದರು, ರಾಜೇಶ್ ಶೆಟ್ಟಿ ಗೋಣಮಜಲು ಧನ್ಯವಾದ ಸಮರ್ಪಿಸಿದರು ಹಾಗೂ ಮನೋಜ್ ಶೆಟ್ಟಿ ಚೇಳೈರು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಸೂರಿಂಜೆ ಮುಖ್ಯ ಶಿಕ್ಷಕಿ ಸವಿತಾ ನಾಯ್ಕ್ ಹಾಗೂ ಸಮಾಜ ಸೇವಕ ಧನಂಜಯ ಪೂಜಾರಿ ಕೃಷ್ಣಾಪುರ ಅವರನ್ನು ಗೌರವಿಸಲಾಯಿತು .

error: Content is protected !!