ಬೆಂಗಳೂರು: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಕೇರಳದ ಶ್ರೀಮದ್ ಎಡನೀರು ಮಠ, ಕಾಸರಗೋಡು ಇವರ ಸಹಯೋಗದೊಂದಿಗೆ ಬುಧವಾರ(ಸೆ.3) ರಂದು ಸಂಜೆ 7.15 ಗಂಟೆಗೆ ಕಾಸರಗೋಡು ಜಿಲ್ಲೆಯ ಗಡಿ ಭಾಗದ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಎಲ್ಲಾ ಕನ್ನಡ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರೋ. ಕೆ.ಸಿ ಶಿವಪ್ಪನವರು ರಚಿಸಿದ ಮುದ್ದುರಾಮನ 10 ಆವೃತ್ತಿ ಕೃತಿಗಳನ್ನು ಕೂಡ ಈ ಸಂದರ್ಭದಲ್ಲಿ ವಿತರಿಸಲಾಯಿತು. ಹೊರನಾಡು ಗಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹೊರತಂದಿರುವ ಹೊರನಾಡಿನ ಗಡಿ ಕನ್ನಡಿಗರಿಗೆ ಇರುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳಿಗೆ ಇರುವಂತಹ ಎಲ್ಲಾ ಸುತ್ತೋಲೆಗಳನ್ನು ಒಂದು ಕಡೆ ಪುಸ್ತಕದ ರೂಪದಲ್ಲಿ ಹೊರತಂದು ಅದನ್ನು ಮಾನ್ಯ ಸಚ್ಚಿದಾನಂದ ಸ್ವಾಮಿಗಳು, ಎಡನೀರು ಮಠ ಇವರು ಬಿಡುಗಡೆಗೊಳಿಸಿದರು. ಅದರ ಪ್ರತಿಯನ್ನುದಕ್ಷಿಣ ಕನ್ನಡ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಿಗೆ ಎಂ ಎ ನೆಲ್ಲಿಕುನ್ನು ಇವರಿಗೆ ಶ್ರೀ ಸೋಮಣ್ಣ ಬೇವಿನಮರದ ಅಧ್ಯಕ್ಷರು ಹಾಗೂ ಪ್ರಕಾಶ ಮತ್ತಿಹಳ್ಳಿ ಕಾರ್ಯದರ್ಶಿ ಗಡಿ ಪ್ರಾಧಿಕಾರ ಇವರು ನೀಡಿದರು. ಹಾಗೂ ಕಾಸರಗೋಡಿನ ಎಲ್ಲಾ ಗ್ರಂಥಾಲಯಗಳಿಗೆ ವಿತರಿಸಲಾಯಿತು.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಈ ಸಂದರ್ಭದಲ್ಲಿ ಗಡಿ ಪ್ರಾಧಿಕಾರದ ಸದಸ್ಯರಾದ ಶ್ರೀ ಎ.ಆರ್. ಸುಬ್ಬಯ್ಯ ಕಟ್ಟೆ ಹಾಗೂ ಕಾಸರಗೋಡಿನ ಪತ್ರಕರ್ತರ ಸಂಘದ ಕಾರ್ಯದರ್ಶಿಯಾದಂತಹ ಶ್ರೀ ಅಕಿಲೇಶ್ ನಗುಮುಗಂ ಹಾಗೂ ಮುಂತಾದವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಡನೀರು ಮಠದ ಚಾತುರ್ಮಾಸ್ಯದ-2025 ಕಾರ್ಯಕ್ರಮದಲ್ಲಿ ಯಕ್ಷಗಾನ, ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಹಾಗೂ ಓಣಂ ಹಬ್ಬದ ಸಂದರ್ಭದಲ್ಲಿ ಮಾನ್ಯ ಶ್ರೀ ಸೋಮಣ್ಣ ಬೇವಿನಮರದ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಇವರು ಮಾತನಾಡಿ ಶೀಘ್ರದಲ್ಲಿ ಡಾ.ಕಯ್ಯಾರ ಕಿಞ್ಞಣ್ಣ ರೈ ಭವವನ್ನು ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.