ಸೆ. 7: ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನಾರಾಯಣ ಗುರು ಜಯಂತಿ ಆಚರಣೆ

ಮಂಗಳೂರು: ಸಂತ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 171ನೇ ಜನ್ಮ ದಿನಾಚರಣೆ ಸೆಪ್ಟೆಂಬರ್ 7, 2025 ರಂದು ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ, ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಆಶ್ರಯದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪೂರ್ವಾಹ್ನ 9.30 ಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಹೆಚ್. ಜಯರಾಜ್ ಸೋಮಸುಂದರಂ ಜ್ಯೋತಿ ಬೆಳಗಿಸಿ ಪೂಜಾ ಹಾಗೂ ಭಜನಾ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ದೀಪಾ ಕಂಫರ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಉರ್ಮಿಳಾ ರಮೇಶ್ ಕುಮಾರ್ ವಿಶೇಷ ಅತಿಥಿಗಳಾಗಿ ಹಾಜರಿರುವರು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.00ರವರೆಗೆ ಭಜನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ 4.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ನೊರ್ದರ್ಸ್ ಸ್ಕೈ ಪ್ರಾಪರ್ಟೀಸ್ ಡೈರೆಕ್ಟರ್ ಮತ್ತು ಶ್ರೀ ಗೋಕರ್ಣನಾಥ ಕ್ಷೇತ್ರ (ಕುದ್ರೋಳಿ) ಟ್ರಸ್ಟಿ ಕ್ರಿತೀನ್ ಡಿ. ಅಮೀನ್ ಉದ್ಘಾಟಿಸಲಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜು, ಚೇಳಾಯರುವಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗುರುವರ್ಯರ ಭಾವಚಿತ್ರದ ಶೋಭಾಯಾತ್ರೆ

ಸಂಜೆ 6.00 ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಿಂದ ಹೊರಟ ಗುರುವರ್ಯರ ಭಾವಚಿತ್ರದ ಶೋಭಾಯಾತ್ರೆ ಕೀಲುಕುದುರೆ, ಕರಗ ನೃತ್ಯ, ಕೋಲಾಟ ಹಾಗೂ ವಿವಿಧ ದೇಶಭೂಷಣಗಳೊಂದಿಗೆ ಮಣ್ಣಗುಡ್ಡೆ, ಕಂಬ್ಯ ಕ್ರಾಸ್ ರಸ್ತೆ ಮಾರ್ಗವಾಗಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ತಲುಪಲಿದೆ.

ಪವಿತ್ರ ಕಾರ್ಯಕ್ರಮಗಳಿಗೆ ಸಾರ್ವಜನಿಕರೆಲ್ಲರೂ ಆಗಮಿಸಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

error: Content is protected !!