ಕಾಲೇಜ್‌ ಹುಡುಗಿ ನಾಪತ್ತೆ: ಯುಪಿ ಯುವಕನ ಜೊತೆ ಪರಾರಿ ಶಂಕೆ

ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿ.ಸಿ.ಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಕಾಟಿಪಳ್ಳ ಗಣೇಶಕಟ್ಟೆ ಮೂಲದ ಯುವತಿಯೊಬ್ಬಳು ನಾಪತ್ತೆಯಾಗಿದ್ದು, ಈಕೆ ಉತ್ತರ ಪ್ರದೇಶದ ಯುವಕನ ಜೊತೆ ಪರಾರಿಯಾಗಿರುವ ಶಂಖೆ ವ್ಯಕ್ತವಾಗಿದೆ. ಇದಕ್ಕೆ  ಪೂರಕವೆಂಬಂತೆ ಇವರಿಬ್ಬರು ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲು ಹತ್ತಿರುವ ಇಬ್ಬರನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಪೊಲೀಸರು ಗುರುತಿಸಿದ್ದಾರೆ.


ಗಣೇಶಕಟ್ಟೆಯ ಪ್ರಜ್ಞಾ (18) ನಾಪತ್ತೆಯಾಗದ ಹುಡುಗಿ.
ಈಕೆ ಸೆ.1ರಂದು ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.

ಪ್ರೀತಿಯ ಬಲೆಗೆ ಬಿದ್ದ ಹುಡುಗಿ!
ತನಿಖೆಯ ವೇಳೆ ಪ್ರಜ್ಞಾಳಿಗೆ ಉತ್ತರ ಪ್ರದೇಶ ಮೂಲದ ಯುವಕನೊಂದಿಗೆ ಪ್ರೀತಿ ಬೆಳೆದಿರುವುದು ಪೊಲೀಸರಿಗೆ ತಿಳಿದುಬಂದಿದೆ. ಈ ಯುವಕ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದನು. ಕಾಟಿಪಳ್ಳದಲ್ಲಿ ಹುಡುಗಿಯ ಮನೆಯ ಹತ್ತಿರವೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಹೀಗಾಗಿ ಇವರಿಬ್ಬರ ಪರಿಚಯ ಸ್ನೇಹವಾಗಿದ್ದು, ನಂತರ ಪ್ರೀತಿಗೆ ತಿರುಗಿರುವ ಶಂಕೆ ವ್ಯಕ್ತವಾಗಿದೆ.

ಬುದ್ದಿ ಹೇಳಿದ್ರೂ ಕೇಳಲಿಲ್ಲ
ಇವರಿಬ್ಬರ ನಂಟು ಕುಟುಂಬದವರಿಗೆ ತಿಳಿದುಬಂದ ನಂತರ, ಮನೆಮಂದಿ ಯುವತಿಗೆ ಹಾಗೂ ಯುವಕನಿಗೆ ದೂರವಿರಲು ಬುದ್ಧಿವಾದ ಮಾಡಿದ್ದರು. ಇಬ್ಬರಿಗೂ ಬೈದು ಸಂಪರ್ಕ ಕಡಿಮೆಗೊಳಿಸಲು ಒತ್ತಾಯಿಸಿದ್ದರು ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

ರೈಲು ಪ್ರಯಾಣದ ಸುಳಿವು
ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲು ಹತ್ತಿರುವ ಇಬ್ಬರನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಪೊಲೀಸರು ಗುರುತಿಸಿದ್ದಾರೆ. ಅಲ್ಲಿಂದ ಲಕ್ನೋಗೆ ಹೊರಟಿರುವ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಸುರತ್ಕಲ್ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಹುಡುಕಾಟ ಆರಂಭಿಸಿದ್ದಾರೆ.

ಪತ್ತೆಗೆ ಮನವಿ
ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಬಲ್ಲ ಪ್ರಜ್ಞಾ ಕಾಣೆಯಾದ ದಿನ ನೀಲಿ ಬಣ್ಣದ ಅರ್ಧತೋಳಿನ ಕಾಲೇಜು ಸಮವಸ್ತ್ರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಳು. ಈ ವಿವರವನ್ನು ಸಾರ್ವಜನಿಕರಿಗೆ ಹಂಚಿ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.

error: Content is protected !!