ಬೆಂಗಳೂರು ಬದಲು ಲಂಡನ್‌ನಲ್ಲಿ ಫಿಟ್‌ನೆಸ್ ಟೆಸ್ಟ್‌ ತೆಗೆದುಕೊಂಡು ವಿವಾದ ಸೃಷ್ಟಿಸಿದ ಕೊಹ್ಲಿ

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮುಂಬರುವ ಅಂತರರಾಷ್ಟ್ರೀಯ ಋತುವಿಗೆ ಸಜ್ಜಾಗುವ ಕಾರ್ಯ ಚುರುಕುಗೊಂಡಿರುವ ಈ ವೇಳೆಯಲ್ಲಿ, ತಂಡದ ಪ್ರಮುಖ ಆಟಗಾರರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಫಿಟ್‌ನೆಸ್ ಪರೀಕ್ಷೆಗೊಳಗಾದರು. ಆದರೆ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಹಾಜರಾಗದೇ, ಲಂಡನ್‌ನಲ್ಲೇ ಫಿಟ್‌ನೆಸ್ ಪರೀಕ್ಷೆ ನಡೆಸಿಕೊಂಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ರೋಹಿತ್ ಶರ್ಮಾ, ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ದಿಗ್ಗಜರು ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಟೆಸ್ಟ್‌ಗೊಳಗಾದರೆ, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿ ಪರೀಕ್ಷೆ ಬರೆದಿದ್ದಾರೆ. ವರದಿ ಈಗಾಗಲೇ ಬಿಸಿಸಿಐಗೆ ಸಲ್ಲಿಕೆಯಾಗಿದೆ ಎಂದು ದೈನಿಕ್ ಜಾಗರಣ್ ವರದಿ ತಿಳಿಸಿದೆ.

ಬಿಸಿಸಿಐ ಮೂಲಗಳು “ಕೊಹ್ಲಿಗೆ ಲಂಡನ್‌ನಲ್ಲಿ ಟೆಸ್ಟ್‌ಗೆ ಖಂಡಿತವಾಗಿ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದರೂ, ಈ ವಿನಾಯಿತಿ ತಂಡದ ಪ್ರೋಟೋಕಾಲ್ ಮತ್ತು ಸಮಾನತೆಯ ಪ್ರಶ್ನೆ ಎಬ್ಬಿಸಿದೆ.

ಅಭಿಮಾನಿಗಳ ಅಸಮಾಧಾನ:

ಲಂಡನ್‌ನಲ್ಲಿ ಫಿಟ್‌ನೆಸ್ ಟೆಸ್ಟ್ ಮಾಡಿಕೊಳ್ಳುವವರೆಗೆ ಬಂದಿದ್ರೆ, ಭಾರತಕ್ಕಿಂತ ಇಂಗ್ಲೆಂಡ್‌ಗಾಗಿ ಆಡಲಿ” ಎಂದು ಅಭಿಮಾನಿಯೊಬ್ಬ X ನಲ್ಲಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಕೊಹ್ಲಿ ಆಫ್-ಸೀಸನ್ ಲಂಡನ್‌ನಲ್ಲಿ ಕಳೆಯುತ್ತಾರೆ, ಫಿಟ್‌ನೆಸ್ ಟೆಸ್ಟ್ ಕೂಡ ಅಲ್ಲಿ, ಈಗ ಅವರು ಭಾರತೀಯ ಜೆರ್ಸಿಯಲ್ಲಿ ಇಂಗ್ಲಿಷ್ ಕ್ರಿಕೆಟಿಗನಂತೆ ಕಾಣುತ್ತಾರೆ” ಎಂದು ತೀವ್ರ ಟೀಕೆ ಮಾಡಿದ್ದಾರೆ.

ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯ ಮೊದಲು ಕೊಹ್ಲಿ ತನ್ನ ಫಿಟ್‌ನೆಸ್ ಪ್ರಮಾಣವನ್ನು ಸಾಬೀತುಪಡಿಸಬೇಕಾದ ಹಂತದಲ್ಲಿರುವಾಗ, ಈ ಬೆಳವಣಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

error: Content is protected !!