ಭೀಕರ ಅಪಘಾತ: ಕೋಲಾರ ಮೂಲದ ಬಾಡಿ ಬಿಲ್ಡರ್ ಅಮೆರಿಕದಲ್ಲಿ ಸಾವು !

ಕೋಲಾರ: ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೋಲಾರದ ಗಾಂಧಿನಗರ ಬಡಾವಣೆಯ ಓರ್ವ ಬಾಡಿ ಬಿಲ್ಡರ್ ಸಾವನ್ನಪ್ಪಿದ್ದಾರೆ.

ಗಾಂಧಿನಗರದ ನಿವಾಸಿ ಸುರೇಶ್ ಕುಮಾರ್ (42) ಮೃತ ವ್ಯಕ್ತಿ.

ಸುರೇಶ್ ಮೂರು ದಿನಗಳ ಹಿಂದೆ ಫ್ಲೋರಿಡಾ – ಟೆಕ್ಸಾಸ್‌ನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಅವರು ಮಾಡೆಲಿಂಗ್ ಜೊತೆ ಕನ್ನಡದ ಹಲವು ನಟ ನಟಿಯರಿಗೆ ದೈಹಿಕ ತರಬೇತಿಯನ್ನೂ ಕೂಡ ನೀಡಿದ್ದರು. ಅವರು ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.

error: Content is protected !!