ಕಾರ್‌ಗೆ ಢಿಕ್ಕಿ ತಪ್ಪಿಸಲು ಹೋದ ಟ್ರಕ್ ಪಲ್ಟಿ: ಗೋಧಿ ರಸ್ತೆ ಪಾಲು

ಸುರತ್ಕಲ್: ಹೆದ್ದಾರಿಯಲ್ಲಿ ಹಠಾತ್ ತಿರುವು ಪಡೆದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಟ್ರಕ್ ಪಲ್ಟಿಯಾಗಿ ಗೋಧಿ ರಸ್ತೆ ಪಾಲಾದ ಘಟನೆ ಇಂದು ಮುಂಜಾನೆ ಸುರತ್ಕಲ್‌ನ ಸೂರಜ್‌ ಹೋಟೆಲ್‌ ಮುಂಭಾಗ ಸಂಭವಿಸಿದೆ.

ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕ ಹಠಾತ್ ತಿರುವು ಪಡೆದಾಗ, ಹಿಂಬದಿಯಿಂದ ಗೋಧಿ ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡರು. ಕಾರಿಗೆ ಢಿಕ್ಕಿ ಹೊಡೆದು ಅಪಘಾತವಾಗುವುದನ್ನು ತಪ್ಪಿಸಲು ಚಾಲಕ ಮುಂದಾಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರಕ್ ಹೆದ್ದಾರಿಯಲ್ಲೇ ಪಲ್ಟಿಯಿತು. ಟ್ರಕ್‌ನಲ್ಲಿದ್ದ ಗೋಧಿ ರಸ್ತೆ ಮೇಲೆ ಚೆಲ್ಲಿಹೋಗಿ ಅಪಾರ ನಷ್ಟವಾಗಿದ್ದಲ್ಲದೆ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಯಿತು.

ಘಟನೆಯಿಂದ ಕಾರಿನ ಹಿಂಭಾಗಕ್ಕೆ ಹಾನಿಯಾಗಿದ್ದರೆ, ಟ್ರಕ್‌ನ ಮುಂಭಾಗಕ್ಕೂ ಹಾನಿಯಾಗಿದೆ. ಸ್ಥಳೀಯರ ಸಹಕಾರದಿಂದ ಗೋಧಿಯನ್ನು ಸ್ಥಳಾಂತರಿಸಲಾಯಿತು.


ಘಟನೆಯಿಂದಾಗಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುರತ್ಕಲ್ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ.

error: Content is protected !!