ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಸದಾ ವತ್ಸಲೆ ಹಾಡನ್ನು ಹೇಳಿದಾಗ ನಾನು ಸದನದಲ್ಲಿದ್ದೇ. ಸುಮಾರು ವರ್ಷಗಳ ಹಿಂದೆ ಡಿಕೆಶಿ ಆರ್‌ಎಸ್‌ಎಸ್ ಕಚೇರಿಗೆ ಹೊಗಿರೋದು ನಿಜ. ಚಡ್ಡಿ ಹಾಕಿರೊದು ನಿಜ. ಶಾಖೆಗೆ ಹೋಗಿದ್ದೆ ಎಂಬ ಸಾಕ್ಷಿಗೆ ಅದನ್ನು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಮನಸ್ಸಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ. ಸೆಪ್ಟಂಬರ್‌ನಲ್ಲಿ ಕ್ರಾಂತಿ ಆಗತ್ತೆ ಅಂತ ರಾಜಣ್ಣ ಹೇಳಿದ್ರು. ಅವರನ್ನೇ ಪಾರ್ಟಿಯಿಂದ ಉಚ್ಛಾಟನೆ ಮಾಡೊ ರೀತಿಯಲ್ಲಿ ಓಡ್ಸಿದಾರೆ. ಒಂದು ಅಂತು ನಿಜ ಡಿಸೆಂಬರ್ ಒಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡೊದಂತು ಸತ್ಯ. ಆ ಬಳಿಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರಾ. ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರಾ ಕಾದು ನೋಡಬೇಕು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪ್ರಯಾಗ್ ರಾಜ್‌ನಲ್ಲಿ ಮುಳುಗಿದರೇ ಪಾಪ ಹೋಗುತ್ತಾ? ಬಡತನ ಹೋಗುತ್ತಾ? ಅಂತ ಹೇಳಿದ್ದರು. ಅದಾದ ಮೇಲೆ ಡಿಕೆಶಿ ಪ್ರಯಾಗರಾಜ್ ಗೆ ಹೋಗಿದ್ದರು. ಹಿಂದೂ ಧರ್ಮದ ಮೇಲೆ ಯಾವಾಗಲೂ ದಾಳಿ ಮಾಡೋ ಕೆಲಸ ಮಾಡ್ತಾರೆ. ಡಿಕೆಶಿಗೆ ಹಿಂದು ಧರ್ಮದ ಮೇಲೆ ನಂಬಿಕೆ ಇದೆ. ಹೀಗಾಗಿ ಅವರು ಪ್ರಯಾಗ್ ರಾಜ್ ಗೂ ಹೊಗ್ತಾರೆ. ಕೊಯಂಬತೂರ್ ನಲ್ಲಿ ಸದ್ಗುರು ಜೊತೆ ವೇದಿಕೆ ಹಂಚಿಕೊಳ್ತಾರೆ. ಅದಾದ ಮೇಲೆ ಅಸೆಂಬ್ಲಿ ಒಳಗಡೆ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಈಗ ಡಿಕೆಶಿ ಆರ್‌ಎಸ್‌ಎಸ್ ಗೀತಿ ಹಾಡಿದ ತಕ್ಷಣ ಬಿಜೆಪಿಗೆ ಬರ್ತಾರೆ ಎಂಬುದು ಊಹಾ ಪೂಹಾ. ಅವರು ಕಟ್ಟ ಕಾಂಗ್ರೆಸ್‌ನ ವ್ಯಕ್ತಿ . ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ತಕ್ಷಣ ಕಾಂಗ್ರೇಸ್‌ನವರು ಹಿಂದೂಪರ ಅಲ್ಲ. ಸಚಿವ ಜಮೀರ್ ಅಹ್ಮದ್ ಹೇಳ್ತಿರ್ತಾರೆ. ಅವರೇನು ಹಿಂದೂಪರನ?
ಆದರೆ ಇತ್ತಿಚಿನ ದಿನಗಳಲ್ಲಿ ಡಿಕೆಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂಬ ಆರೋಪವನ್ನು ಶಾಸಕರು ಮಾಡಿದ್ದಾರೆ. “ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪ್ರಯಾಗ್‌ರಾಜ್‌ಗೆ ಹೋಗಿ ಪಾಪ ತೊಳೆದುಕೊಳ್ಳುತ್ತಾರೆ ಎಂದು ಹೇಳಿದ ನಂತರ, ಡಿಕೆಶಿವಕುಮಾರ್ ಕೂಡ ಅಲ್ಲಿಗೆ ತೆರಳಿದರು. ಆದರೆ ಜನರನ್ನು ಗೊಂದಲಗೊಳಿಸುವ ರೀತಿಯಲ್ಲಿ ಅವರು ನಡೆಯುತ್ತಿದ್ದಾರೆ. ಸದ್ಗುರು ಜಗ್ಗಿ ವಾಸುದೇವರ ಜೊತೆ ವೇದಿಕೆ ಹಂಚಿಕೊಂಡು, ಆರ್‌ಎಸ್‌ಎಸ್ ಗೀತೆಯನ್ನು ಹಾಡಿದವರು ಇದೇ ಡಿಕೆಶಿ. ಹೀಗಿರಲೂ ಅವರು ನಿಜವಾದ ಹಿಂದೂಪರರೇ ಅಥವಾ ಕೇವಲ ರಾಜಕೀಯ ಲಾಭಕ್ಕಾಗಿ ನಾಟಕವಾಡುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ” ಎಂದು ಹೇಳಿದರು.