ಈ ಹಿಂದೆ ಬೋಲ್ಡಾಗಿ ಕಾಣಿಸಿ ಸಭ್ಯ ಹುಡುಗರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಗ್ ಬಾಸ್ ಬೆಡಗಿ ಸೋನು ಶ್ರೀನಿವಾಸ ಗೌಡ ಇದೀಗ ಮತ್ತೆ ಬೋಲ್ಡಾವತಾರ ತಾಳಿ ಸುದ್ದಿಯಾಗಿದ್ದಾರೆ. ಶ್ರೀಲಂಕಾದ ಬೀಚ್‌ನಲ್ಲಿ ಕೇವಲ ಟೂ ಪೀಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹಲ್ ಚಲ್ ಎಬ್ಬಿಸಿದ್ದಾರೆ.
ಕಲರ್ ಫುಲ್ ಬಿಕಿನಿ ತೊಟ್ಟು, ಹಾರ್ಟ್ ಶೇಪ್‌ನಲ್ಲಿ ಕೈಯನ್ನು ಮೇಲೆತ್ತಿ ಸೋನು ಪೋಸ್ ಕೊಟ್ಟಿದ್ದಾರೆ. ಈ ಫೊಟೋವನ್ನು ಇನ್ಸ್ಟಾದಲ್ಲಿ ಅವರು ಹಂಚಿಕೊಂಡಿದ್ದು, ಬಳಕುವ ಸೊಂಟ, ಬಂಗಾರದ ಬಣ್ಣದ ಬ್ಯೂಟಿ ಕಂಡು, ಪಡ್ಡೆ ಹುಡುಗರು ಅಭಿನಂದನೆಗಳನ್ನು ಸಲ್ಲಿಸಿದರೆ, ಸಭ್ಯ ಹುಡುಗರು ಈ ರೀತಿ ಮಾಡೋದು ತಪ್ಪು ಕಣಮ್ಮಿ ಅಂದಿದ್ದಾರೆ.
ಇನ್ನೂ ಕಾಮೆಂಟ್‌ನಲ್ಲಿ ವಾವ್, ಸೂಪರ್‌ಗೂ ಮೀರಿ, ʻಬಾಲಿವುಡ್ ಹೀರೋಯಿನ್, ಮೈ ಗರ್ಲ್ʼ ಅಂತ ಸಹ ಯುವಕರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಇದಕ್ಕೆ ಶ್ರೀಲಂಕಾ ಹೋಗ್ಬೇಕಿತ್ತಾ ಅಂತ ಕಾಲೆಳೆದಿದ್ದಾರೆ. ಅದರಲ್ಲೂ ಕೆಲವರು ಸಂಸ್ಕೃತಿಯ ಪಾಠ ಮಾಡೋಕೆ ಇಳಿದಿದ್ದಾರೆ.
ಮಾಲ್ಡಿವ್ಸ್ ಪ್ರವಾಸದಲ್ಲಿದ್ದಾಗ ಸೋನು ಗೌಡ ಬಿಕನಿ ತೊಟ್ಟು ಸಮುದ್ರದ ದಡದಲ್ಲಿ ರೀಲ್ಸ್ ಮಾಡಿ ಹಂಚಿಕೊಂಡಿದ್ದರು.