ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ದಿನಾಂಕವನ್ನು 64ನೇ ಎಸಿಎಂಎಂ ಕೋರ್ಟ್​ ಮತ್ತೊಮ್ಮೆ ಮುಂದೂಡಿದೆ.


ಕೊಲೆ ಆರೋಪಿ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಕೆಲ ಆರೋಪಿಗಳು ಮಾತ್ರ ಇಂದು (ಆ.12) ಸಿವಿಲ್ ಕೋರ್ಟ್​ಗೆ ಹಾಜರಾಗಿದ್ದರು. ಆದರೆ, ಎ10 ವಿನಯ್, ಎ15 ,ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಕೋರ್ಟ್​​ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಪಡಿಸಲಾಗಿದೆ. ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಹಾಜರು ಇರಬೇಕು ಎಂದು ಕೋರ್ಟ್​ ನಿರ್ದೇಶಿಸಿದೆ.

ಎಲ್ಲಾ ಆರೋಪಿಗಳು ಹಾಜಾರಾದರೆ ಇಂದೇ ಚಾರ್ಜಸ್ ಫ್ರೇಮ್ ಮಾಡುವ ಸಾದ್ಯತೆ ಇತ್ತು. ಕೆಲ ಆರೋಪಿಗಳು ಹಾಜಾರಾಗದ ಕಾರಣ ಚಾರ್ಜಸ್ ಫ್ರೇಮ್ ಮಾಡಿಲ್ಲ.

ಚಾರ್ಜಸ್​​ ಪ್ರೇಮ್ ಎಂದರೆ ದೋಷಾರೋಪ ಹೊರಿಸುವುದು‌. ಯಾವ ಯಾವ ಸೆಕ್ಷನ್​ಗಳಡಿ ಆರೋಪ ಇದೆ ಎಂದು ಕೋರ್ಟ್​ನಲ್ಲಿ ಜಡ್ಜ್ ಆರೋಪ ಹೊರಿಸುತ್ತಾರೆ. ಆ ಸೆಕ್ಷನ್​​ಗಳ ಬಗ್ಗೆ ಕೋರ್ಟ್​ನಲ್ಲಿ ಇನ್ನೂ ಮುಂದೆ ವಾದ ನಡೆಯುತ್ತೆ.

ಆದೇಶ ಕಾಯ್ದಿರಿಸಿದ ಸುಪ್ರೀಂ
ಈಗಾಗಲೇ ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಟ್ರಯಲ್ ಬಗ್ಗೆ ಪ್ರಶ್ನಿಸಿತ್ತು. ಆಗ ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಮುಗಿಸುತ್ತೇವೆ ಎಂದು ಉತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಟ್ರಯಲ್ ದಿನಾಂಕ ನಿಗದಿ ಆಗುವ ಸಾಧ್ಯತೆ ಇತ್ತು. ಆದರೆ, ಕೋರ್ಟ್ ವಿಚಾರಣೆ ಮತ್ತೊಮ್ಮೆ ಮುಂದೂಡಿದ್ದು, ಸೆ.9ಕ್ಕೆ ನಿಗದಿಪಡಿಸಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!