ಮಂಗಳೂರು: 90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಶಿಲ್ಪಾ ಶೆಟ್ಟಿ ಕೂಡಾ ಒಬ್ಬರು. ಅವರಿಗೆ ದೇಶಾದ್ಯಂತ ಅಭಿಮಾನಿಗಳ ಬಳಗವಿದೆ. ಅಪ್ಪಟ ತುಳು ಹುಡುಗಿಯಾಗಿರುವ ಶಿಲ್ಪಾಗೆ ತುಳುನಾಡು ಎಂದ್ರೆ ಎಲ್ಲಿಲ್ಲದ ಪ್ರೀತಿ. ತಮಿಳಿನಲ್ಲಿ, ಅವರು ಖುಷಿ ಮತ್ತು ಮಿಸ್ಟರ್ ರೋಮಿಯೋದಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಶಿಲ್ಪಾ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ಶಿಲ್ಪಾ ಶೆಟ್ಟಿಗೆ ಶಮಿತಾ ಶೆಟ್ಟಿ ಎಂಬ ತಂಗಿ ಇದ್ದಾರೆ. ಅವರ ಹೆಸರು ಶಮಿತಾ.. 46 ವರ್ಷ ವಯಸ್ಸಿನ ಶಮಿತಾ ಇನ್ನೂ ಮದುವೆಯಾಗಿಲ್ಲ. ಶಿಲ್ಪಾಗೆ ಈಗ 50 ವರ್ಷ ಅಂದ್ರೆ ಯಾರೂ ನಂಬಲ್ಲ.
ಇತ್ತೀಚೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ಶಿಲ್ಪಾ ಶೆಟ್ಟಿ, ತನ್ನ ತಂಗಿ ಶಮಿತಾಗೆ ಸಕ್ರಿಯವಾಗಿ ವರನನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. “ನಾನು ನೇರವಾಗಿ ಅನೇಕ ಪುರುಷರ ಬಳಿಗೆ ಹೋಗಿ ನೀವು ಮದುವೆಯಾಗಿದ್ದೀರಾ ಎಂದು ಕೇಳುತ್ತೇನೆ. ಆಗ ಅವರು ಯಾಕೆಂದು ಅಚ್ಚರಿಯಿಂದ ಕೇಳುತ್ತಾರೆ. ಆಗ ನಾನು ನನ್ನ ತಂಗಿಗೆ ಎಂದು ಹೇಳುಳುವುದಾಗಿ ಶಿಲ್ಪಾ ಹೇಳಿದ್ದಾರೆ.