ನಿಮ್ಮ ವಂಚನೆ ನಾಚಿಕೆಗೇಡಿನ ಸಂಗತಿ: ಪ್ರಿಯಾಂಕಾ ಗಾಂಧಿಗೆ ಇಸ್ರೇಲ್‌ ವಾಗ್ದಾಳಿ

ಟೆಲ್‌ ಅವಿವ್: ಇಸ್ರೇಲ್ ಆಡಳಿತದಿಂದ ಪ್ಯಾಲೆಸ್ಟೈನ್‌ನಲ್ಲಿ ನರಮೇಧ ನಡೆಯುತ್ತಿದ್ದು, ಗಾಜಾದಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದೆ ಮಾಡಿದ್ದ ಎಕ್ಸ್ ಪೋಸ್ಟ್‌ಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರ್ಯೂವೆನ್ ಅಜರ್ ಇಂದು(ಆ.12)‌ ಪ್ರಿಯಾಂಕಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗಾಜಾ ಬಗ್ಗೆ ಪೋಸ್ಟ್​ ಮಾಡಿರುವ ಪ್ರಿಯಾಂಕಾ, ಇಸ್ರೇಲ್​ ನರಮೇಧವನ್ನು ನಡೆಸುತ್ತಿದೆತ್ತಿದೆ. ಗಾಜಾದಲ್ಲಿ 60,000 ಕ್ಕೂ ಹೆಚ್ಚು ಜನರನ್ನು ಇಸ್ರೇಲ್​ ಕೊಂದಿದೆ. ಇವರಲ್ಲಿ 18,430 ಮಕ್ಕಳು ಸೇರಿದ್ದಾರೆ. ಇಸ್ರೇಲ್​, ಗಾಜಾದಲ್ಲಿ ಲಕ್ಷಾಂತರ ಜನರನ್ನು ಹಸಿವಿನಿಂದ ಸಾಯಿಸುವ ಬೆದರಿಕೆ ಹಾಕುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಅಲ್ಲದೆ, ಇಸ್ರೇಲ್​ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ಪ್ರಿಯಾಂಕಾ, ಮೌನ ಮತ್ತು ನಿಷ್ಕ್ರಿಯತೆಯಿಂದ ಈ ಅಪರಾಧಗಳನ್ನು ಸಕ್ರಿಯಗೊಳಿಸುವುದು ಸ್ವತಃ ಅಪರಾಧ. ಇಸ್ರೇಲ್, ಪ್ಯಾಲೆಸ್ಟೈನ್ ಜನರ ಮೇಲೆ ದಾಳಿ ಮಾಡಿತ್ತಿದೆ. ಇದನ್ನು ನೋಡಿಕೊಂಡು ಭಾರತ ಸರ್ಕಾರ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ” ಎಂದು ಟೀಕಾಪ್ರಹಾರ ನಡೆಸಿದರು.

ಪ್ರಿಯಾಂಕಾ ಪೋಸ್ಟ್​ಗೆ ಇಸ್ರೇಲ್​ ರಾಯಭಾರಿ ತಿರುಗೇಟು
ಪ್ರಿಯಾಂಕಾ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರ್ಯೂವೆನ್ ಅಜರ್, ನಿಮ್ಮ ವಂಚನೆ ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ. ಇಸ್ರೇಲ್ 25,000 ಹಮಾಸ್ ಭಯೋತ್ಪಾದಕರನ್ನು ಕೊಂದಿದೆ ಮತ್ತು ಪ್ಯಾಲೇಸ್ಟಿನಿಯನ್ ಸಂಘಟನೆಯು ನಾಗರಿಕರ ಹಿಂದೆ ಅಡಗಿಕೊಂಡು ಸಹಾಯ ಪಡೆಯಲು ಪ್ರಯತ್ನಿಸುತ್ತಿರುವ ಜನರ ಮೇಲೆ ಗುಂಡು ಹಾರಿಸುವುದರಿಂದ ಮಾನವ ಜೀವಗಳು ನಷ್ಟವಾಗಿವೆ ಎಂದು ರಾಯಭಾರಿ ಹೇಳಿದರು.

ಇಸ್ರೇಲ್ ಇಲ್ಲಿಯವರೆಗೆ ಗಾಜಾಗೆ 2 ಮಿಲಿಯನ್ ಟನ್ ಆಹಾರವನ್ನು ಪೂರೈಸಿದೆ, ಆದರೆ ಹಸಿವನ್ನು ಸೃಷ್ಟಿಸಲು ಹಮಾಸ್ ಅವರನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಹಮಾಸ್ ಸಂಖ್ಯೆಗಳನ್ನು ನಂಬಬೇಡಿ ಮತ್ತು ಕಳೆದ 50 ವರ್ಷಗಳಲ್ಲಿ ಗಾಜಾದ ಜನಸಂಖ್ಯೆಯು ಶೇಕಡಾ 450 ರಷ್ಟು ಬೆಳೆದಿದೆ ಎಂದು ರಾಯಭಾರಿ ಪ್ರಿಯಾಂಕಾ ಅವರನ್ನು ತಿಳಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!