ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ನಿರೀಕ್ಷಕ ಪದ್ಮಯ ರಾಣೆರವರು ಇಲಾಖೆಯಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜುಲೈ 31 ರಂದು ವಯೋನಿವೃತ್ತಿ ಹೊಂದಿದ್ದಾರೆ. ಪದ್ಮಯ ರಾಣೆಯ ಪತ್ನಿ ಸಹಿತ ಕುಟುಂಬಿಕರನ್ನು ಎಸ್‌ಪಿ ಕಚೇರಿಗೆ ಕರೆಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಸ್ಮರಣಿಕೆ ನೀಡಿ, ಅತ್ಯಂತ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.
ಪದ್ಮಯ ರಾಣೆಯವರು 1992 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನಿಸ್ತಂತು ಸೇವೆಗೆ ಸೇರ್ಪಡೆಗೊಂಡು, 1992 ರಿಂದ 1997 ರವರೆಗೆ ಪೊಲೀಸ್ ರೇಡಿಯೋ ಸ್ಟೇಷನ್ ಶಿಕಾರಿಪುರದಲ್ಲಿ ವೈರ್ ಲೆಸ್ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆನಂತರ 1997ರಿಂದ 2011ರವರೆಗೆ ಜಿಲ್ಲಾ ನಿಯಂತ್ರಣ ಕೊಠಡಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದು, 2011 ರಿಂದ 2014ರ ವರೆಗೆ ಎ ಎನ್ ಎಫ್ ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2014 ರಿಂದ 31-7-2025 ರವರೆಗೆ ಜಿಲ್ಲಾ ನಿಯಂತ್ರಣ ಕೊಠಡಿ ದಕ್ಷಿಣ ಕನ್ನಡ ಜಿಲ್ಲೆ , ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ 2022ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.