ನಿಮಿಷಾ ಪ್ರಿಯಾಗೆ ಕ್ಷಮೆ ನೀಡಲು ಸಾಧ್ಯವೇ ಇಲ್ಲ, ಆಕೆ ಗಲ್ಲಿಗೇರಲೇಬೇಕು: ತಲಾಲ್ ಅಬ್ದೋ ಸಹೋದರ

ನವದೆಹಲಿ: ಆಕೆಯನ್ನು ಗಲ್ಲಿಗೇರಿಸಲೇಬೇಕು , ಆಕೆಯ ಅಪರಾಧಕ್ಕೆ ಕ್ಷಮೆ ನೀಡಲು ಸಾಧ್ಯವೇ ಇಲ್ಲ ಎಂದು 2017 ರಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಂದ ಕೊಲೆಗೀಡಾಗಿದ್ದಾರೆ ಎನ್ನಲಾದ ತಲಾಲ್ ಅಬ್ದೋ ಮೆಹದಿ ಅವರ ಸಹೋದರ ಅಬ್ದುಲ್ ಫತ್ತಾ ಮೆಹದಿ ಹೇಳಿದ್ದಾರೆ. ಭಾರತೀಯ ಮಾಧ್ಯಮಗಳು ಆಕೆ ಅಮಾಯಕಿ ಎಂದು ಪ್ರಕರಣವನ್ನು ವಿಷಯಾಂತರ ಮಾಡಲು ಯತ್ನಿಸುತ್ತಿದೆ ಎಂದು ಆತ ಆರೋಪಿಸಿದ್ದಾನೆ.

ನಿಮಿಷಾ ಪ್ರಿಯಾ ಇಂದು(ಜು.16) ಗಲ್ಲಿಗೇರಿಸಬೇಕಿತ್ತು, ಆದರೆ ವಿವಿಧೇಡೆಯಿಂದ ನಡೆದ ದೀರ್ಘ ಮಾತುಕತೆಗಳ ಮೂಲಕ ಮರಣದಂಡನೆಯನ್ನು ಮುಂದೂಡಲಾಗಿದೆ. ಭಾರತ ಸರ್ಕಾರದ ಸಂಪೂರ್ಣ ಬೆಂಬಲ, ಸೌದಿ ಅರೇಬಿಯಾದಲ್ಲಿರುವ ಏಜೆನ್ಸಿಗಳು ಮತ್ತು ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಧಾರ್ಮಿಕ ಹಸ್ತಕ್ಷೇಪ ಸೇರಿದಂತೆ ಹಲವಾರು ಕಡೆಗಳಿಂದ ಆಕೆಯ ಮರಣದಂಡನೆಯನ್ನು ತಪ್ಪಿಸಲು ನಿರಂತರ ಪ್ರಯತ್ನಗಳು ನಡೆದವು. ಪ್ರಕರಣದ ಮಧ್ಯಸ್ಥಿಕೆ ವಹಿಸಲು ಯೆಮೆನ್‌ನ ಶೂರಾ ಕೌನ್ಸಿಲ್‌ನಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಲಾಗಿತ್ತು. ಇವೆಲ್ಲವೂ ಮರಣದಂಡನೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವ ನಿರ್ಧಾರಕ್ಕೆ ಕಾರಣವಾಯಿತು.

ರಾಜ್ಯ ಸಿಪಿಐ-ಎಂ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಬುಧವಾರ ಬೆಳಿಗ್ಗೆ ಮುಸ್ಲಿಯಾರ್ ಅವರನ್ನು ಭೇಟಿಯಾಗಿದ್ದು, ಮಾತುಕತೆಗಳು ನಡೆಯುತ್ತಿವೆ.

“ಮರಣದಂಡನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಸ್ಲಿಯಾರ್ ನನಗೆ ಹೇಳಿದ್ದಾರೆ, ಮತ್ತು ಇನ್ನೂ ಹೆಚ್ಚಿನ ಅಂಶಗಳನ್ನು ಚರ್ಚಿಸಲಾಗುತ್ತಿದೆ. ಯೆಮೆನ್‌ನಲ್ಲಿ ಅಧಿಕಾರಿಗಳೊಂದಿಗೆ ಮತ್ತು ಕ್ಷಮಾದಾನ ನೀಡಬೇಕಾದ ಕುಟುಂಬದೊಂದಿಗೆ ಜನರು ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು” ಎಂದು ಗೋವಿಂದನ್ ಹೇಳಿದರು.

ಏತನ್ಮಧ್ಯೆ, ಮುಂದಿನ ಆದೇಶದವರೆಗೆ ಮರಣದಂಡನೆಯನ್ನು ಸ್ಥಗಿತಗೊಳಿಸಿದ್ದು, ತಲಾಲ್ ಅಬ್ದೋ ಕುಟುಂಬ ನಿರ್ಧಾರ ಅಂತಿಮವಾಗಿದೆ. ಒಂದು ವೇಳೆ ಕುಟುಂಬಿಕರು ಬ್ಲಡ್‌ ಮನಿಗೆ ಒಪ್ಪಿದರೆ ಮರಣ ದಂಡನೆ ರದ್ದಾಗುತ್ತದೆ. ಆದರೆ ತಲಾಲ್ ಅಬ್ದೋ ಮೆಹದಿ ಸೋದರನ ಹೇಳಿಕೆಯಿಂದ ಕಳವಳ ಉಂಟಾಗಿದೆ. ಆದರೂ ಅಧಿಕಾರಿಗಳ ಜೊತೆಗೆ ಮಾತುಕತೆಯಲ್ಲಿ ತೊಡಗಿರುವ ಧಾರ್ಮಿಕ ಮುಖಂಡರಯ ಸಮಸ್ಯೆಯನ್ನು ಪರಿಹರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ.

ಸಮಸ್ಯೆ ಏನು?

ಈಗ ದೊಡ್ಡ ಅಡಚಣೆಯೆಂದರೆ ಕುಟುಂಬಕ್ಕೆ ದುರಂತದ ಸತ್ಯಾಸತ್ಯತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಅದು ಮುಗಿದ ನಂತರ ಬ್ಲಡ್‌ ಮನಿ ಹಸ್ತಾಂತರಿಸುವುದು. ಆದರೆ ಮುಂದಿನ ಮಾತುಕತೆ ಬ್ಲಡ್‌ ಮನಿಯ ಬಗ್ಗೆ ಕೇಂದ್ರೀಕೃತವಾಗಲಿದೆ. ಬ್ಲಡ್‌ ಮನಿ ಎಂದರೆ ಕ್ಷಮೆಗೆ ಪ್ರತಿಯಾಗಿ ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡುವ ಆರ್ಥಿಕ ಪರಿಹಾರವಾಗಿದ್ದು, ಇದು ಷರಿಯಾ ಕಾನೂನಿನಡಿಯಲ್ಲಿ ಅಂಗೀಕರಿಸಲ್ಪಟ್ಟ ಪದ್ಧತಿಯಾಗಿದೆ.

ಫೀಲ್ಡಿಗಿಳಿದ ಉದ್ಯಮಿ ಎಂ ಎ ಯೂಸುಫ್ ಅಲಿ
ಕೇರಳದ ಬಿಲಿಯನೇರ್ ಎಂ ಎ ಯೂಸುಫ್ ಅಲಿ ಅವರು ಅಗತ್ಯವಿರುವ ಯಾವುದೇ ಆರ್ಥಿಕ ಸಹಾಯವನ್ನು ನೀಡಲು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರದ ಪ್ರಯತ್ನದ ಮೇಲೆ ಎಲ್ಲರ ದೃಷ್ಟಿ ಇದ್ದು, ಮುಂದೇನಾಗಬಹುದು ಎಂದು ಕುತೂಹಲ ಮೂಡಿದೆ.

ಪ್ರಿಯಾ ಪ್ರಸ್ತುತ ಯೆಮೆನ್‌ನ ಜೈಲಿನಲ್ಲಿದ್ದು, 2017 ರಲ್ಲಿ ತನ್ನ ಮಾಜಿ ಬಿಸ್‌ನೆಸ್‌ ಪಾರ್ಟ್ನರ್ ಮೆಹ್ದಿಯ ಕೊಲೆ ಆರೋಪದ ಮೇಲೆ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!