ಮಂಗಳೂರು : ವಿಶ್ವದ ಪ್ರತಿಷ್ಠಿತ ಕಂಪೆನಿಗಳಲ್ಲಿ ಒಂದಾದ “ರೋಲ್ಸ್ ರಾಯ್ಸ್ ” ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮಂಗಳೂರಿನ 20ರ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ “ರಿತುಪರ್ಣ” ರವರ ನಿವಾಸಕ್ಕೆ ವಿವಿಧ ಮಹಿಳಾ ಪರ ಸಂಘಟನೆಗಳು ಭೇಟಿ ನೀಡಿ, ಅಭಿನಂದಿಸಿ , ಗೌರವಿಸಿದರು.
ಇಂಟರ್ನ್‌ಶಿಪ್ ಬಯಸಿ 8 ತಿಂಗಳ ಕಾಲ ಸಂದರ್ಶನ ನೀಡಿದ್ದ ಈಕೆ ಆ ಸಂಸ್ಥೆಯಲ್ಲಿ ನೇರವಾಗಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾರೆ. ಪ್ರಸಕ್ತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಇಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ವೇತನದ ಆಫರನ್ನು ಪಡೆದುಕೊಂಡಿದ್ದಾರೆ.
ಕಿರಿಯ ವಯಸ್ಸಿನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದ ರಿತುಪರ್ಣ ರವರ ಸಾಧನೆ ನಿಜಕ್ಕೂ ಶ್ಲಾಘನೀಯ . ಇವರ ಸಾಧನೆ ಇಂದಿನ ಪೀಳಿಗೆ ಹಾಗೂ ಮುಂದಿನ ತಲೆಮಾರಿಗೂ ಮಾದರಿಯಗಲಿ ಹಾಗೂ ಭವಿಷ್ಯದಲ್ಲಿ ರಿತುವರ್ಣವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಸಾಮರಸ್ಯ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ , ಮದರ್ ತೆರೆಸಾ ವಿಚಾರ ವೇಧಿಕೆಯ ಫ್ಲೇವಿ ಕ್ರಾಸ್ತಾ , ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಮಾರಿ ಅಪ್ಪಿ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಲಾ ಪದ್ಮನಾಭ , ಸೇವಾದಳದ ಜಿಲ್ಲಾಧ್ಯಕ್ಷ ಅನಿತಾ ಕೆಪಿಟಿ , ಮಹಿಳಾ ಹೋರಾಟಗಾರ್ತಿ ಮೀನಾ ಟೆಲ್ಲಿಸ್ , ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯೆ ಶೈಲ ನೀತಾ ಡಿಸೋಜ , ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳಾದ ವಿದ್ಯಾ ಶೆಣೈ , ಅರ್ಚನಾ ಆಚರ್ , ಸಾಮರಸ್ಯದ ಸದಸ್ಯರಾದ ನೀತ್ ಶರಣ್ , ರಾಜೇಶ್ ದೇವಾಡಿಗ , ಟಿಸಿ ಗಣೇಶ್ ಮತ್ತಿತರು ಉಪಸ್ಥಿತರಿದ್ದರು.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t