ಮಂಗಳೂರು: ಅಸ್ತ್ರ ಗ್ರೂಪ್ ಅರ್ಪಿಸುವ ಮಿಸ್ ಡಿವೈನ್ ದಿವಾ ರಾಷ್ಟ್ರಮಟ್ಟದ ಫ್ಯಾಷನ್ ಪೇಜೆಂಟ್ ಸೌಂದರ್ಯ ಸ್ಪರ್ಧೆ ಮತ್ತು ಗ್ರ್ಯಾಂಡ್ ಫಿನಾಲೆ ನಗರದ ಅವತಾರ್ ಹೋಟೆಲ್ ನಲ್ಲಿ ಜರುಗಲಿದೆ ಎಂದು ಪ್ರಾಯೋಜಕತ್ವ ವಹಿಸಿರುವ ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ದೇಶದ ನಾನಾ ಭಾಗಗಳಿಂದ ಆಯ್ದ 50 ಮಂದಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿವೈನ್ ದಿವಾ ಸ್ಪರ್ಧೆಗೆ ಅಸ್ತ್ರ ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ. ಇದರಿಂದ ಹೊಸಬರಿಗೆ ಅವಕಾಶ ಸಿಗಲಿದೆ. ಆಯೋಜಕರು ಮತ್ತು ಪಾಲ್ಗೊಳ್ಳುವ ಎಲ್ಲರಿಗೂ ಶುಭಾಶಯಗಳು” ಎಂದರು.
ಬಳಿಕ ಮಾತಾಡಿದ ಆಯೋಜಕ ಸಾಹಿಲ್ ಅವರು, “ಮಿಸ್ ಡಿವೈನ್ ದಿವಾ ಮಂಗಳೂರಿನ ಹೆಣ್ಣುಮಕ್ಕಳಿಗೆ ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಆಗಿದೆ. ಜಗತ್ತಿಗೆ ಮಂಗಳೂರಿನ ಸೌಂದರ್ಯವನ್ನು ಪಸರಿಸಲು ಸೂಕ್ತ ವೇದಿಕೆಯಾಗಿದ್ದು ಇದರಲ್ಲಿ ಕಾಶ್ಮೀರದಿಂದ ಹಿಡಿದು ದೇಶದ ನಾನಾ ಭಾಗಗಳ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಇದರ ಪ್ರಯೋಜಕತ್ವ ವಹಿಸಿದ ಅಸ್ತ್ರ ಸಂಸ್ಥೆಗೆ ಮನದಾಳದ ಕೃತಜ್ಞತೆಗಳು. ಅಸ್ತ್ರ ನಮ್ಮ ಬೆನ್ನಿಗೆ ನಿಲ್ಲದಿದ್ದರೆ ಈ ಸ್ಪರ್ಧೆ ನಡೆಯುತ್ತಿರಲಿಲ್ಲ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಜಯ್ ಕುಮಾರ್, ಮೋಹನ್ ದಾಸ್ ರೈ, ಸೃಷ್ಟಿವೇಣು, ಸಾಹಿಲ್, ಇಶಿಕ, ಸಂದೀಪ್ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಅಜಿತ್ ಸಿಂಗ್ ಕಾರ್ಯಕ್ರಮ ನಿರೂಪಿಸಿದರು.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t