ಪುತ್ತೂರು: ಮಳೆಗಾಲ ಬಂತೆಂದರೆ ಸಾಕು. ನಗರದ ರಸ್ತೆಗಳೆಲ್ಲಾ ಹೊಂಡಮಯವಾಗಿದ್ದು ಅರ್ಧ ಕಿ.ಮೀ. ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. ಒಮ್ಮೆ ಈ ಹಾದಿಯಲ್ಲಿ ಸಂಚರಿಸಿದ ಸವಾರರು ಮತ್ತೊಮ್ಮೆ ಈ ರಸ್ತೆಯಲ್ಲಿ ಹೋಗೋದೆ ಬೇಡ ಎನ್ನುವಷ್ಟು ಹತಾಷೆ ಮೂಡಿಸುತ್ತದೆ.
ರಸ್ತೆಗಳು ಗುಂಡಿ ಬಿದ್ದು ಅಪಾಯ ಸಂಭವಿಸುವಷ್ಟು ಹದಗೆಟ್ಟಿದ್ದರೂ, ದುರಸ್ತಿಗೊಳಿಸುವ ಪ್ರಯತ್ನ ಇನ್ನೂ ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ಆಕ್ರೊಷ ಕೇಳಿಬರುತ್ತಿದೆ. ದರ್ಬೆ ಜಂಕ್ಷನ್, ಕಲ್ಲಾರೆ, ಬೊಳುವಾರು, ಕೂಳೂರು ,ಪಡೀಲ್ ಜಂಕ್ಷನ್‌ನಲ್ಲಿಯೂ ಇದೇ ಸ್ಥಿತಿ ಕಾಣಸಿಗುತ್ತಿದೆ. ಮಳೆಗಾಲದ ಮುನ್ನ ಹೊಂಡ ಮುಚ್ಚುವ ಕಾರ್ಯ ನಡೆದರೂ ಅದು ಒಂದೇ ಮಳೆಗೆ ತನ್ನ ಹಿಂದಿನ ದುಸ್ಥಿತಿಗೆ ಬಂದು ತಲುಪುತ್ತಿದೆ.
ದರ್ಬೆ ಜಂಕ್ಷನ್, ಕಲ್ಲಾರೆ, ಬೊಳುವಾರು ಸಹಿತ ನಗರದ ನಾನಾ ಜಂಕ್ಷನ್‌ಗಳ ಕಥೆ ಹೊಂಡ ಗುಂಡಿಗಳದ್ದೆ. ಬೊಳುವಾರಿನಲ್ಲಿ ಎರಡು ತಿಂಗಳ ಹಿಂದೆ ಹಾಕಿದ ಡಾಂಬರು ಎದ್ದು ಹೋಗಿದೆ. ಹಾರಾಡಿ ರೈಲ್ವೆ ಸೇತುವೆ ಹೊಂಡ ಸೃಷ್ಟಿಯಾಗಿದ್ದರೆ, ಪಡೀಲ್ ಜಂಕ್ಷನ್‌ನಲ್ಲಿಯು ಅದೇ ಸ್ಥಿತಿ ಇದೆ.
ಮಳೆ ಬರುವುದಕ್ಕಿಂತ ಕೆಲ ತಿಂಗಳ ಮೊದಲೇ ದುರಸ್ತಿ ಮಾಡಿದರೆ ಮಳೆಗಾಲಕ್ಕೆ ಡಾಮರು ಎದ್ದು ಹೋಗುವುದಿಲ್ಲ. ಆದರೆ ಮಳೆಗಾಲ ಬರುವ ಹತ್ತು ದಿನ ಮೊದಲು ಡಾಮರು ಹಾಕಿದರೆ ಅದು ಮಳೆಗೆ ನಿಲ್ಲುವುದಿಲ್ಲ ಅನ್ನುವುದನ್ನು ಸಾಮಾನ್ಯ ಜ್ಞಾನ. ಆದರೆ ಆಡಳಿತ ವ್ಯವಸ್ಥೆಗೆ ಇದು ಕೂಡ ಅರ್ಥವಾಗುತ್ತಿಲ್ಲ ಎಂದು ಜನರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t