ಕೆಮ್ಮಾಲೆ ಗ್ರೂಪ್‌ನ ಉದ್ಯಮಿ ರಾಘವೇಂದ್ರ ಕುಂದರ್ ನಿಧನ

ಉಡುಪಿ: ಉಡುಪಿಯ ಕೆಮ್ಮಾಲೆ ಗ್ರೂಪ್‌ನ ಉದ್ಯಮಿ ರಾಘವೇಂದ್ರ ಕುಂದರ್ (48) ಶುಕ್ರವಾರ ನಿಧನರಾಗಿದ್ದಾರೆ.

ರಾಘವೇಂದ್ರ ಅವರು ಕೆಲಸದ ಸ್ಥಳದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಪಟ್ಟು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಇವರು ಬಹು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಎಂದು ಹೆಸರುವಾಸಿಯಾಗಿದ್ದರು.

ಕೆಮ್ಮಾಲೆ ಗ್ರೂಪ್, ಬೇಕ್ ಸ್ಟುಡಿಯೋ, ಫಿಶ್ ಫ್ಯಾಕ್ಟರಿ (ಸೀಫುಡ್ ರೆಸ್ಟೋರೆಂಟ್) ಮತ್ತು ಕೆಮ್ಮಾಲೆ ಕನ್‌ಸ್ಟ್ರಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ತನ್ನ ಜನಪ್ರಿಯ ಬ್ರ‍್ಯಾಂಡ್‌ಗಳಿಗೆ ಹೆಸರುವಾಸಿಯಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!