ಪಾಲಕ್ಕಾಡ್: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾರಿಗೆ ಜುಲೈ 16 ರಂದು ಮರಣದಂಡನೆ ವಿಧಿಸಿರುವುದು ದೃಢಪಟ್ಟಿದೆ ಎಂದು ಪತಿ ಟಾಮಿ ಥಾಮಸ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದೂರವಾಣಿಯಲ್ಲಿ ಮುಖಾಂತರ ತಿಳಿಸಿದ್ದಾರೆ.
ಮಿಷಾ ಅವರು ಪ್ರಸ್ತುತ ಬಂಧನದಲ್ಲಿರುವ ಸನಾ ಕೇಂದ್ರ ಕಾರಾಗೃಹದಿಂದ ಕಳೆದ ವಾರ ಕಳುಹಿಸಲಾದ ವಾಟ್ಸಾಪ್ ನೋಟ್ ಮತ್ತು ವಾಟ್ಸಾಪ್ ಆಡಿಯೋ ಮೆಸೇಜ್ ಮೂಲಕ ಸುದ್ದಿಯನ್ನು ತಿಳಿಸಿದ್ದಾರೆ. ಜೈಲಿನ ಅಧ್ಯಕ್ಷರು ನಿರ್ಧಾರ ಮತ್ತು ದಿನಾಂಕವನ್ನು ವೈಯಕ್ತಿಕವಾಗಿ ತನಗೆ ತಿಳಿಸಿದ್ದಾಗಿ ಆಕೆ ಹೇಳಿದ್ದಾಗಿ ಟಾಮಿ ಹೇಳಿದ್ದರು.
“ಪತ್ನಿ ಮರಣದಂಡನೆ ದಿನಾಂಕದ ಬಗ್ಗೆ ನನಗೆ ಹೇಳಿದ್ದು, ತೀವ್ರ ಹತಾಶೆ, ನೋವಿನಲ್ಲಿದ್ದರು. ನಾನೂ ಕೂಡಾ ವಾಟ್ಸಾಪ್ ಸಂದೇಶದ ಮೂಲಕ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ, ಅವರ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಭರವಸೆ ನೀಡಿದ್ದೇನೆ” ಎಂದು ಥಾಮಸ್ ಹೇಳಿದರು.
ಮರಣದಂಡನೆ:
ಪಾಲಕ್ಕಾಡ್ ಮೂಲದ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಉದ್ಯಮಿ ತಲಾಲ್ ಅಬ್ದೋ ಮೆಹ್ದಿ ಅವರ ಕೊಲೆ ಆರೋಪದ ಮೇಲೆ ಯೆಮೆನ್ ನ್ಯಾಯಾಲಯವು ಈಕೆ ಶಿಕ್ಷೆ ವಿಧಿಸಿದ್ದು, 2020 ಜೈಲಲ್ಲಿದ್ದು, ಇದೀಗ ಮರಣದಂಡನೆ ಶಿಕ್ಷೆಗೆ ಹತ್ತಿರವಾಗಿದ್ದಾರೆ. ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023 ರ ನವೆಂಬರ್‌ನಲ್ಲಿ ಅವರ ಅಂತಿಮ ಮೇಲ್ಮನವಿಯನ್ನು ವಜಾಗೊಳಿಸಿತು, ಆದಾಗ್ಯೂ ನ್ಯಾಯಾಲಯವು ಬಲಿಪಶುವಿನ ಕುಟುಂಬವು ಯೆಮೆನ್ ಕಾನೂನಿನಡಿಯಲ್ಲಿ ರಬ್ಲಡ್ ಮನಿ ಸ್ವೀಕರಿಸಿದರೆ ಕ್ಷಮೆ ಕೊಡುವ ಪದ್ಧತಿ ಗಲ್ಫ್ ರಾಷ್ಟ್ರದಲ್ಲಿದೆ. ಆದರೆ ಹೌತಿ ಬಂಡುಕೋರರ ಆಡಳಿತದಲ್ಲಿರುವ ಸನಾ ಎಂಬಲ್ಲಿರುವ ನಿಮಿಷಾ ಬ್ಲಡ್ ಮನಿಗೆ ಒಪ್ಪಿಲ್ಲ.
ಕೊನೆಯ ಪ್ರಯತ್ನ
ಗುರುವಾರ, ಪ್ರಕರಣದ ಕುರಿತು ಚರ್ಚಿಸಲು ಥಾಮಸ್ ಶಾಸಕ ಚಾಂಡಿ ಉಮ್ಮನ್ ಅವರೊಂದಿಗೆ ರಾಜಭವನದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದರು. “ರಾಜ್ಯಪಾಲರು ತಕ್ಷಣ ನನ್ನ ಮುಂದೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ಭರವಸೆ ನೀಡಿದರು. ಅವರು ಈಗ ಯೆಮೆನ್‌ನಲ್ಲಿರುವ ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು ಮತ್ತು ಅವರಿಗೆ ಸಹಾಯದ ಭರವಸೆ ನೀಡಿದರು” ಎಂದು ಥಾಮಸ್ ಹೇಳಿದರು.
ಯೆಮೆನ್ ಜೈಲು ಕೈದಿಗಳಿಗೆ ಕುಟುಂಬದೊಂದಿಗೆ ಸಂವಹನ ನಡೆಸಲು ವಾಟ್ಸಾಪ್ ಸೀಮಿತ ಅವಕಾಶ ನೀಡುತ್ತದೆ. ನಿಮಿಷಾ ಅವರೊಂದಿಗೆ ಕುಟುಂಬ ನಿಯಮಿತ ಸಂಪರ್ಕದಲ್ಲಿದೆ ಎಂದು ಥಾಮಸ್ ಹೇಳಿದರು. “ಅಲ್ಲಿ ನಡೆಯುತ್ತಿರುವ ಎಲ್ಲದರ ಬಗ್ಗೆ ಅವಳು ನನಗೆ ತಿಳಿಸುತ್ತಾಳೆ. ನಾನು ಅವಳನ್ನು ದೃಢವಾಗಿ ಉಳಿಯುವಂತೆ ಧೈರ್ಯ ಹೇಳುತ್ತಲೇ ಇರುತ್ತೇನೆ ಮತ್ತು ಭಾರತ ಮತ್ತು ಕೇರಳ ಸರ್ಕಾರಗಳು ಮತ್ತು ಅವಳ ಉದ್ದೇಶಕ್ಕಾಗಿ ಕೆಲಸ ಮಾಡುವವರ ಪ್ರಯತ್ನಗಳು ಯಶಸ್ವಿಯಾಗುತ್ತವೆ” ಎಂದು ಅವರು ಹೇಳಿದರು.
ಗುರುವಾರ ರಾಜ್ಯಪಾಲರೊಂದಿಗಿನ ತಮ್ಮ ಭೇಟಿಯ ಬಗ್ಗೆ ಥಾಮಸ್ ನಿಮಿಷಾಗೆ ಮಾಹಿತಿ ನೀಡಿದರು ಮತ್ತು ಮರಣದಂಡನೆಯನ್ನು ತಡೆಯಲು ಭಾರತೀಯ ರಾಜತಾಂತ್ರಿಕರು ಮತ್ತು ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿಯು ನಡೆಸಿದ ನಿರಂತರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು.
ಏತನ್ಮಧ್ಯೆ, ಗುರುವಾರ, ನಿಮಿಷಾ ಪ್ರಿಯಾ ಅವರ ಜೀವವನ್ನು ಉಳಿಸಲು ತುರ್ತು ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಅರ್ಜಿಯನ್ನು ಜುಲೈ 14 ರಂದು (ಸೋಮವಾರ) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
ಹಿರಿಯ ವಕೀಲ ರಘುಂತ್ ಬಸಂತ್ ಮತ್ತು ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಪ್ರತಿನಿಧಿಸುವ ‘ನಿಮಿಶಾ ಪ್ರಿಯಾ – ಅಂತರರಾಷ್ಟ್ರೀಯ ಕ್ರಿಯಾ ಮಂಡಳಿ’ ಈ ಅರ್ಜಿಯನ್ನು ಸಲ್ಲಿಸಿದೆ. ತುರ್ತು ಪರಿಸ್ಥಿತಿಯನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿದಾರರಿಗೆ ಅರ್ಜಿಯ ಪ್ರತಿಯನ್ನು ಭಾರತದ ಅಟಾರ್ನಿ ಜನರಲ್ ಕಚೇರಿಗೆ ತಲುಪಿಸುವಂತೆ ನಿರ್ದೇಶಿಸಿತು.
“ವಿಷಯದ ಗಂಭೀರ ಮತ್ತು ತುರ್ತು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣದಲ್ಲಿ ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಟಾರ್ನಿ ಜನರಲ್ ಮೂಲಕ ನ್ಯಾಯಾಲಯಕ್ಕೆ ತಿಳಿಸಲು ನಾವು ಭಾರತ ಒಕ್ಕೂಟವನ್ನು ವಿನಂತಿಸುತ್ತೇವೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.