ಮಲ್ಪೆ: ನಾಡದೋಣಿ ಮಗುಚಿ ಮೀನುಗಾರ ಸಾವು

ಉಡುಪಿ: ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ನಡೆದಿದೆ.

ಪಿತ್ರೋಡಿ ನಿವಾಸಿ ನೀಲು (48) ಮೃತ ವ್ಯಕ್ತಿ.

ಸಮುದ್ರದ ಅಲೆಯ ಹೊಡೆತಕ್ಕೆ ನಾಡದೋಣಿ ಮಗುಚಿ ಬಿದ್ದಿದೆ. ಹೀಗಾಗಿ ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ನೀಲು ಮೃತಪಟ್ಟಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!