ಕೆನಡಾದಲ್ಲಿ ಭಾರತ ಮೂಲದ ತರಬೇತಿ ನಿರತ ಪೈಲಟ್ ಸೇರಿ ಇಬ್ಬರು ಮೃತ್ಯು

ಕೆನಡಾ: ಕೆನಡಾದ ಮನಿಟೊಬಾ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಭಾರತ ಮೂಲದ ತರಬೇತಿ ನಿರತ ಪೈಲಟ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಟೊರೆಂಟೊದ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ಶ್ರೀಹರಿ ಸುಕೇಶ್ ಮೃತ ಪೈಲಟ್ ಎಂದು ಗುರುತಿಸಲಾಗಿದೆ, ಶ್ರೀಹರಿ ಹಾರಿಸುತ್ತಿದ್ದ ಸಿಂಗಲ್ ಎಂಜಿನ್ ವಿಮಾನಕ್ಕೆ ಕೆನಡಾದ ಯುವಕನೊಬ್ಬ ಚಲಾಯಿಸುತ್ತಿದ್ದ ಅದೇ ಮಾದರಿಯ ಮತ್ತೊಂದು ವಿಮಾನವು ಆಕಾಶದಲ್ಲಿ ಡಿಕ್ಕಿ ಹೊಡೆದಿದೆ.

ಇಬ್ಬರೂ ತರಬೇತಿ ನಿರತ ಪೈಲಟ್‌ಗಳು ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಅಭ್ಯಾಸ ಮಾಡುತ್ತಿದ್ದರು. ಲ್ಯಾಂಡಿಂಗ್ ಸ್ಟ್ರಿಪ್ ಸಮೀಪಿಸುತ್ತಿದ್ದಾಗ ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ ಎಂದು ಸಿಬಿಸಿ ವರದಿ ಹೇಳಿದೆ.

ಈ ಘಟನೆಯ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಾಗುವುದು ಎಂದು ಕೆನಡಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!