ಮಂಗಳೂರು: ವಾಹನವನ್ನು ಬಿಡಿಸಲು ಲಂಚಕ್ಕಾಗಿ ಅಂಗಲಾಚಿದ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಓರ್ವ ತಸ್ಲಿಂ (ಸಿಹೆಚ್‌ಸಿ 322) ಅವರು 5000 ರೂ. ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದಿದ್ದಾರೆ.
ತಸ್ಲೀಂ ಠಾಣೆಯ ಮತ್ತೋರ್ವ ಪೊಲೀಸ್ ವಿನೋದ್ (ಸಿಹೆಚ್‌ಸಿ 451) ಮುಖಾಂತರ ರೂ 30,000 ಲಂಚದ ಹಣ ಕೊಟ್ಟು ಒರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದರು. ಕೊನೆಗೆ ಕೊನೆಗೆ 5000 ರೂ.ಗೆ ಡೀಲ್ ಮಾಡಿ ಅದನ್ನು ಸ್ವೀಕರಿಸುತ್ತಿದ್ದಾಗಲೇ ತಸ್ಲೀಂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಘಟನೆಯ ವಿವರ: ದೂರುದಾರರ ಕಾರು ಮತ್ತು ಸ್ಕೂಟರ್ ಮದ್ಯೆ ನಂತೂರು ಸರ್ಕಲ್‌ನಲ್ಲಿ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಕಾರು ಹಾಗೂ ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದ್ದರು. ಪಿರ್ಯಾದಿದಾರರು ಎರಡನ್ನೂ ಪೊಲೀಸ್ ಠಾಣೆಗೆ ನೀಡಿದ್ದರಿ.
ಆದರೆ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಪಿರ್ಯಾದಿದಾರರಿಗೆ 50,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಪಿರ್ಯಾದಿದಾರರು ತನ್ನ ವಕೀಲರಲ್ಲಿ ತಿಳಿಸಿದ್ದರು. ವಕೀಲರು ಠಾಣೆಗೆ ಭೇಟಿ ನೀಡಿ ಪಿಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಾಗ ʻಪಿರ್ಯಾದಿದಾರರು ಕಾರನ್ನು ಸ್ವೀಕರಿಸಿರುತ್ತಾರೆʼ ಎಂದು ಸಹಿ ಪಡೆದುಕೊಂಡಿದ್ದರು. ಆದರೂ ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ತಸ್ಲಿಂ ಕಾರನ್ನು ಪಿರ್ಯಾದಿದಾರರಿಗೆ ಬಿಟ್ಟುಕೊಡಲು ಅವರ ಮೊಬೈಲ್ ಬಲವಂತದಿಂದ ಪಡೆದುಕೊಂಡು ಕಾರನ್ನು ಬಿಟ್ಟು ಕಳುಹಿಸಿದ್ದರು.
ತನ್ನ ಮೊಬೈಲನ್ನು ವಾಪಸ್ ಕೊಡುವಂತೆ ಕೇಳಿಕೊಂಡಾಗ ತಸ್ಲಿಂ, ರೂ. 50,000 ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಮೊಬೈಲ್ ಹಿಂತಿರುಗಿಸಬೇಕಾದರೆ ಓರಿಜಿನಲ್ ಲೈಸನ್ಸ್ ಠಾಣೆಗೆ ತಂದುಕೊಡುವಂತೆ ತಿಳಿಸಿದ್ದರು. ಪಿರ್ಯಾದಿದಾರರು ಒರಿಜಿನಲ್ ಲೈಸನ್ಸ್ ಅನ್ನು ನೀಡಿದ್ದರು. ತಸ್ಲಿಂ ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ಮುಖಾಂತರ ರೂ 30,000 ಲಂಚದ ಹಣ ಕೊಟ್ಟು ಒರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದರು. ಪಿರ್ಯಾದಿದಾರರು ಜುಲೈ 9 ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ಭೇಟಿ ಮಾಡಿ ಮಾತನಾಡಿದ್ದಾರೆ. ಆಗ ಅವರು ಒರಿಜಿನಲ್ ಲೈಸನ್ಸ್ ನೀಡಲು ರೂ 10,000. ಹಣವ ನೀಡುವಂತೆ ತಿಳಿಸಿದ್ದಾರೆ. ಆಗ ಪಿರ್ಯಾದಿದಾರರು ತನ್ನಲ್ಲಿ ರೂ 500 ಇದೆ ಎಂದಾಗ, ರೂ 5000 ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದರು.
ಪಿರ್ಯಾದಿದಾರರು ಲಂಚದ ಹಣ ಕಡಿಮೆ ಮಾಡಿ ಎಂದಾಗ ಒರಿಜಿನಲ್ ಲೈಸನ್ಸ್ ಬೇಕಾದರೆ ರೂ 5000 ಲಂಚ ಕೊಡಬೇಕು ಎಂದಿದ್ದರು. ಪಿರ್ಯಾದಿದಾರರಿಗೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಇಂದು ಪಿರ್ಯಾದುದಾರರು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ರೂ. 5000 ರೈ. ಹಂಚದ ಹಣ ಸ್ವೀಕರಿಸುತ್ತಿದ್ದಂತೆ ರೆಡ್‌ಹ್ಯಾಂಡೆಡ್ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಇವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಹಾಗೂ ಚಂದ್ರಶೇಖರ್ ಕೆ.ಎನ್ ಮಂಗಳೂರು ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.