ಮಳಲಿ: ಮಳಲಿ ಪೂವಾರು ಅಂಗನವಾಡಿಯ ಶಿಕ್ಷಕಿ ಪಾರ್ವತಿ ನಾವುಡ ಇವರಿಗೆ ಗಂಜಿಮಠ ಮಹಾ ಶಕ್ತಿಕೇಂದ್ರದ ವ್ಯಾಪ್ತಿಯ ಬಡಗುಳಿಪಾಡಿ ವತಿಯಿಂದ ಗುರುವಂದನೆ ನಡೆಸುವ ಮೂಲಕ ಗುರು ಪೂರ್ಣಿಮೆ ಹಬ್ಬವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ಶೋಹನ್ ಅತಿಕಾರಿ, ಕಾರ್ಯದರ್ಶಿ ರೇಖಾ ರಾಜೇಶ್, ಗಂಜಿಮಠ ಶಕ್ತಿಕೇಂದ್ರದ ಕಾರ್ಯದರ್ಶಿ ತಮ್ಮಯ್ಯ ಪೂಜಾರಿ, ಬೂತಿನ ಅಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯದರ್ಶಿ ಪುರಂದರ್ ಕುಲಾಲ್ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.