ಹುಡುಗಿಯರ ಫೋಟೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹಂಚುತ್ತಿದ್ದ ಆರೋಪಿ ಸೆರೆ !

ಬೆಂಗಳೂರು: ನಗರದ ಪ್ರಮುಖ ಸ್ಥಳಗಳಾದ ಚರ್ಚ್​ ಸ್ಟ್ರೀಟ್​, ಕೋರಮಂಗಲ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಓಡಾಡುವ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದ 26 ವರ್ಷದ ವ್ಯಕ್ತಿ(ಗುರುದೀಪ್ ಸಿಂಗ್)ಯನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಓಡಾಡುವ ಮಹಿಳೆಯರ ಅನುಮತಿ ಪಡೆಯದೇ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡುತ್ತಿದ್ದ. ಅದರಂತೆ ಯುವತಿ ಒಬ್ಬರ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿ, ಆ ಯುವತಿಗೆ ಅಪರಿಚಿತರಿಂದ ಅಸಭ್ಯ ಮೆಸೇಜ್​​ಗಳು ಬರಲಾರಂಭಿಸಿತು. ಗಾಬರಿಯಾದ ಅವರು ಸೋಶಿಯಲ್ ಮೀಡಿಯಾದಲ್ಲಿ ಏನಾಗಿದೆ ಅಂತಾ ಹುಡುಕಾಟ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

ತಮಗೆ ಆಗುತ್ತಿರುವ ತೊಂದರೆಯನ್ನು ಯುವತಿ ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವ್ಯಕ್ತಿ ಚರ್ಚ್​​ ಸ್ಟ್ರೀನ್​ನಲ್ಲಿರುವ ಅವ್ಯವಸ್ಥೆಗಳನ್ನು ಚಿತ್ರೀಕರಿಸುವಂತೆ ನಾಟಕವಾಡುತ್ತಾ ಓಡಾಡುವ ಈತ ಸಿಟಿಯಲ್ಲಿನ ಸಮಸ್ಯೆಗಳನ್ನು ಚಿತ್ರೀಕರಿಸುತ್ತಿದ್ದಾನೆ ಅಂದುಕೊಂಡರೆ ಅದು ನಮ್ಮ ಮೂರ್ಖತನ, ಆತನೊಬ್ಬ ಹೆಣ್ಮಕ್ಕಳನ್ನು ಹಿಂಬಾಲಿಸಿ ವಿಡಿಯೋ ಮಾಡಿಕೊಳ್ಳುತ್ತಾನೆ. ನಂತರ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾನೆ. ಈ ರೀತಿಯ ಅನುಭವ ನನಗೂ ಆಗಿದೆ. ಅನೇಕ ಹೆಣ್ಮಕ್ಕಳ ವಿಡಿಯೋಗಳನ್ನು ಈತ ಇದೇ ರೀತಿ ಚಿತ್ರೀಕರಿಸಿರಬಹುದು. ಆತನಿಗೆ ನಾನು ವಿಡಿಯೋ ರಿಮೂವ್ ಮಾಡುವಂತೆ ಕೇಳಿಕೊಂಡೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈತ ಹೆಚ್ಚು ವೀವ್ಸ್​ ಪಡೆಯಲು ಮಾಡುತ್ತಿರುವ ಮಾರ್ಗ ಇವೆಲ್ಲಾ. ಈ ವ್ಯಕ್ತಿ ನಿಜವಾಗಿಯೂ ಸಿಕ್ಕಿ ಬೀಳುತ್ತಾನೆ ಎಂದು ಭಾವಿಸುತ್ತೇನೆ ಎಂದು ಬೆಂಗಳೂರು ಸಿಟಿ ಪೊಲೀಸ್ ಹಾಗೂ ಸೈಬರ್ ಕ್ರೈಂ ಅಧಿಕಾರಿಗಳ ಗಮನಕ್ಕೆ ತಂದಿದ್ದಳು.

ಸೋಶಿಯಲ್ ಮೀಡಿಯಾದಲ್ಲಿ ಯುವತಿ ಹಂಚಿಕೊಂಡಿದ್ದ ನೋವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಕೆಆರ್​ ಪುರಂ ನಿವಾಸಿಯಾಗಿದ್ದು, ಸಹೋದರನ ಜೊತೆ ವಾಸವಿದ್ದಾನೆ ಎನ್ನಲಾಗಿದೆ. ಹಾಗೇ ಈತ ಹ್ಯಾಂಡಲ್​ ಮಾಡುತ್ತಿದ್ದ ಇನ್​ಸ್ಟಾಗ್ರಾಮ್​ನಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಬನಶಂಕರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ ಎಂದು ತಿಳಿದುಬಂದಿದೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!