ಜು.13ರಂದು ಶ್ರೀಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ವಿಚಾರ ಸಂಕಿರಣ

ಮಂಗಳೂರು: ಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಸಲುವಾಗಿ ʻವರ್ತಮಾನ ಕಾಲಘಟ್ಟದಲ್ಲಿ ಶ್ರೀ ನಾರಾಯಣ ಗುರುಗಳ ಸಂದೇಶ ಪ್ರಸ್ತುತತೆʼ ಎಂಬ ವಿಷಯದ ಕುರಿತಂತೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜುಲೈ 13ರ ಆದಿತ್ಯವಾರ ಬೆಳಿಗ್ಗೆ 9.30 ರಿಂದ ನಂಜೆ 4.00 ರ ವರೆಗೆ ಶ್ರೀಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದರು.


ಈ ಕಾರ್ಯಕ್ರಮದ ಸಹಯೋಗವನ್ನು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ, ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಗಾಂಧಿ ನಗರ, ಮಂಗಳೂರು ಹಾಗೂ ಶ್ರೀ ನಾರಾಯಣಗುರು ಧರ್ಮಪ್ರಸರಣ ಸೇವಾ ಟ್ರಸ್ಟ್ (ರಿ) ಮಂಗಳೂರು ವಹಿಸಿಕೊಂಡಿದೆ. ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಉದ್ಘಾಟಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅದರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪದ್ಮರಾಜ್ ಆರ್. ಪೂಜಾರಿ (ಕೋಶಾಧಿಕಾರಿ, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಕುದ್ರೋಳಿ), ವಸಂತ ಕಾರಂದೂರು, ಸಂಚಾಲಕರು (ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ), ಊರ್ಮಿಳಾ ರಮೇಶ್ ಕುಮಾರ್ (ಮ್ಯಾನೇಜಿಂಗ್ ಡೈರೆಕ್ಸರ್, ದೀಪಾ ಕಂಪರ್ಟ್ಸ್ ಮಂಗಳೂರು), ಪ್ರಮಲ್ ಕುಮಾರ್, ಅರ್ಕಿಟೆಕ್ಸ್ (ಅಧ್ಯಕ್ಷರು, ಕಾರ್ಕಳ ಬಿಲ್ಲದ ಸಂಘ) ಪಾಲ್ಗೊಳ್ಳಲಿದ್ದಾರೆ.


ಶೇಖರ್ ಪೂಜಾರಿ (ಉಪಾಧ್ಯಕ್ಷರು, ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ), ಡಾ.ಬಿ.ಜಿ. ಸುವರ್ಣ (ಉಪಾಧ್ಯಕ್ಷರು, ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ), ಹರೀಶ್ ಕೆ. ಪೂಜಾರಿ (ಶ್ರೀ ನಾರಾಯಣಗುರು ಧರ್ಮಪ್ರಸರಣ ಸೇವಾ ಟ್ರಸ್ಟ್ (ರಿ) ಮಂಗಳೂರು) ಗೌರವ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 11.20ರಿಂದ 12ರವರೆಗೆ ʻಶೈಕ್ಷಣಿಕ ಪುನರುತ್ಥಾನ ಮತ್ತು ನಾರಾಯಣಗುರು” ಎಂಬ ವಿಷಯದ ಬಗ್ಗೆ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅವರು ವಿಚಾರ ಮಂಡನೆ ಮಾಡುವರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಜಯರಾಜ್ ಎನ್. ನಿರ್ದೇಶಕರು, (ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ), ವಸಂತ ಕಾರಂದೂರು, ಸಂಚಾಲಕರು (ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ), ಶ್ರೀ ಹರೀಶ್ ಕೆ. ಪೂಜಾರಿ, ಅಧ್ಯಕ್ಷರು, (ಶ್ರೀ ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ) ಮಂಗಳೂರು), ನಾಗೇಶ್ ಕರ್ಕೇರ ಆಡಳಿತಾಧಿಕಾರಿ, (ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ), ಮುದ್ದು ಮೂಡುಬೆಳ್ಳೆ, ಸ್ಥಾಪಕ ನಿರ್ದೇಶಕರು, (ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ) ಹಾಗೂ ರಘುರಾಜ್ ಕದ್ರಿ, ಸಿಂಡಿಕೇಟ್ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯ, ಪ್ರಾಂಶುಪಾಲರು, ಗೋಕರ್ಣನಾಥೇಶ್ವರ ಪ.ಪೂ. ಕಾಲೇಜು) ಹಾಗೂ ಡಾ. ಜಯಪ್ರಕಾಶ್, ಪ್ರಾಂಶುಪಾಲರು (ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು) ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!