ಬಜ್ಪೆ: ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದಾರೆ. ನೀರುಡೆ ಕೊಂಪದವು ನಿವಾಸಿ ಶಶಿಧರ ಆಚಾರ್ಯ (42) ನಾಪತ್ತೆಯಾದ ವ್ಯಕ್ತಿ.
ಮರದ ಪಾಲಿಷ್ ಕೆಲಸ ಮಾಡುತ್ತಿದ್ದ ಅವರು ಅಮಲು ಪದಾರ್ಥ ಸೇವಿಸುವ ಅಭ್ಯಾಸ ಹೊಂದಿದ್ದರು. ಕೆಲಸಕ್ಕೆ ಹೋದರೆ ಹಲವು ದಿನಗಳ ಬಳಿಕ ಮನೆಗೆ ಮರಳುವುದು ಸಾಮಾನ್ಯವಾಗಿತ್ತು. ಅದರಂತೆ ಎ. 1ರಂದು ಮನೆಯಿಂದ ಹೋಗಿದ್ದರು. ಮೂರು ತಿಂಗಳಾದರೂ ವಾಪಸ್ ಬಾರದೇ ಇರುವ ಹಿನ್ನೆಲೆಯಲ್ಲಿ ಅವರ ತಮ್ಮ ಮಾಧವ ಆಚಾರ್ಯ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು 5.4 ಅಡಿ ಎತ್ತರ, ಅವರು ತುಳು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಚಹರೆಯ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಬಜ್ಪೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.