ಶರಣ್ ಪಂಪ್‌ವೆಲ್‌ಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶ ನಿಷೇಧ

ಚಿಕ್ಕಮಗಳೂರು: ಜು.6ರಿಂದ ಆ.4ರವರೆಗೆ 30 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾಡಳಿತ ಹಿಂದುತ್ವ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್‌ಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಶರಣ್ ಪಂಪ್‌ವೆಲ್ ಮೇಲೆ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಕೆಲ ಸಂಘಟನೆಗಳ ಮುಖಂಡರು ಚಿಕ್ಕಮಗಳೂರು, ಮೂಡಿಗೆರೆ, ಆಲ್ಲೂರಿನಲ್ಲಿ ಶರಣ್ ಪಂಪ್‌ವೆಲ್‌ ಅವರನ್ನು ಕರೆಸಿ ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದರು.

ಶರಣ್ ಪಂಪ್‌ವೆಲ್‌ ಕೋಮುದ್ವೇಷ ಹರಡುವಂತಹ ಭಾಷಣ ಮಾಡುವ ಪ್ರವೃತ್ತಿ ಹೊಂದಿದ್ದು, ಈತನ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ, ಗುಂಪು ಘರ್ಷಣೆ ಉಂಟಾಗುವ ಸಾಧ್ಯತೆಗಳಿವೆ ಎನ್ನುವ ಪೊಲೀಸ್‌ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕ ಪುಟ್ಟ ಘಟನೆಗಳೂ ಕೂಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿವೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t

error: Content is protected !!